Site icon Suddi Belthangady

ಸ. ಹಿ. ಪ್ರಾಥಮಿಕ ಶಾಲೆ ಫಂಡಿಜೆವಾಳ್ಯ – ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ – “ಎನ್. ಎಸ್. ಎಸ್ ವಿದ್ಯಾರ್ಥಿಗಳು ದೇಶಕ್ಕೆ ಅಮೂಲ್ಯ ಸೊತ್ತು” -ಜೆರೋಮ್ ಡಿಸೋಜ

ಪಂಡಿಜೆ: “ಎನ್. ಎಸ್. ಎಸ್ ವಿದ್ಯಾರ್ಥಿಗಳು ತಮ್ಮ 7 ದಿವಸಗಳಲ್ಲಿ ಮಾಡಿದ ಸೇವೆ ಅದು ದೇಶಕ್ಕೆ ಸಲ್ಲಿಸಿದ ಸೇವೆ. ಇಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡ ವಿದ್ಯಾರ್ಥಿಗಳು ದೇಶಕ್ಕೆ ಅಮೂಲ್ಯ ರತ್ನಗಳಾಗುತ್ತಾರೆ “ಎಂದು ಸಂತ ಅಂತೋನಿ ಶಿಕ್ಷಣ ಸಂಸ್ಥೆಗಳ ಸಂಚಾಲಕ ವಂದನೀಯ ಸ್ವಾಮಿ ಜೆರೋಮ್ ಡಿ ಸೋಜ ಹೇಳಿದರು. ಅವರು ಸ. ಹಿ. ಪ್ರಾಥಮಿಕ ಶಾಲೆ ಫoಡಿಜೆವಾಳ್ಯದಲ್ಲಿ ನಡೆದ ಸಂತ ಅಂಥೋನಿ ಪದವಿ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತಿದ್ದರು.

ಸಮಾರೋಪ ಭಾಷಣ ಮಾಡಿದ ಸ. ಕಿ. ಪ್ರಾ. ಶಾಲೆ ಮಕ್ಕಿಯ ಸಹ ಶಿಕ್ಷಕ ಗಣರಾಜ ಎಸ್. “ರಾಷ್ಟ್ರೀಯ ಸೇವಾ ಯೋಜನೆಯು ವಿದ್ಯಾರ್ಥಿಗಳ ಜೀವನದ ಪಥವನ್ನು ಬದಲಿಸುವುದು ಮಾತ್ರವಲ್ಲದೆ ಜವಾಬ್ದಾರಿ, ಕಷ್ಟದ ಅರಿವು ವಿದ್ಯಾರ್ಥಿಗಳಲ್ಲಿ ಮೂಡಿಸುವಲ್ಲಿ ತುಂಬಾ ಸಹಕಾರಿಯಾಗಲಿದೆ. ಶಿಬಿರದಲ್ಲಿ ಕಲಿಯುವ ಪ್ರತಿಯೊಂದು ಪಾಠವೂ ಅವರ ಭವಿಷ್ಯವನ್ನು ಉಜ್ವಲಗೊಳಿಸುವಲ್ಲಿ ಸಂದೇಹವೇ ಇಲ್ಲ ” ಎಂದು ಹೇಳಿದರು.

7 ದಿನದ ಎನ್. ಎಸ್. ಎಸ್ ಶಿಬಿರದ ವರದಿಯನ್ನು ಶಿಬಿರಾರ್ಥಿ ಅಶ್ವಿತಾ ವಾಚಿಸಿದರು. ಶಿಬಿರಾರ್ಥಿಗಳು ತಾವು ಕಳೆದ ಶಿಬಿರದ ಅನುಭವವನ್ನು ತಮ್ಮ ಅನಿಸಿಕೆಯ ಮೂಲಕ ಹಂಚಿಕೊಂಡರು.
ಹಾಗೂ ಊರವರ ಪರವಾಗಿ ದಯಾನಂದ್ ಭಟ್, ಕೃಷಿಕರು, ಹೊಸಹಿತ್ಲು 7 ದಿನ ನಡೆದ ಶಿಬಿರದ ಕುರಿತಾಗಿ ತಮ್ಮ ಅನಿಸಿಕೆಯನ್ನು ಹಂಚಿಕೊಂಡರು.

ವೇದಿಕೆಯಲ್ಲಿ ಮುಖ್ಯ ಅಭ್ಯಾಗತರಾಗಿ ಸಂತ ಅಂತೋನಿ ಕಾಲೇಜಿನ ಪ್ರಾಂಶುಪಾಲ ಆಲ್ವಿನ್ ಸೆರಾವೋ, ರತ್ನಾಕರ ಹಂಕರ್ಜಾಲು ನಿರ್ದೇಶಕರು, ಪ್ರಾ. ಕೃಷಿ ಪತ್ತಿನ ಸಹಕಾರಿ ಸಂಘ ವೇಣೂರು, ಶ್ರೀ ವಿಕಾಸ್ ಹೆಬ್ಬಾರ್ ಉಪನ್ಯಾಸಕ ಎಕ್ಸೆಲ್ ಪದವಿ ಪೂರ್ವ ಕಾಲೇಜು ಗುರುವಾಯನಕೆರೆ, ಜ್ಯೋತಿ ಉಪಾಧ್ಯಕ್ಷರು ಎಸ್. ಡಿ. ಎಂ. ಸಿ. ದ. ಕ. ಜಿ. ಪಂ. ಪ್ರಾಥಮಿಕ ಶಾಲೆ ಫಂಡಿಜೇವಾಳ್ಯ, ದಿನೇಶ್ ಮೂಲ್ಯ ಸದಸ್ಯರು ಗ್ರಾಮ ಪಂಚಾಯತ್ ಕುಕ್ಕೇಡಿ, ಭವನೀಶ್ ಪಂಡಿಜೆ ಅಧ್ಯಕ್ಷರು ಹಳೆ ವಿದ್ಯಾರ್ಥಿ ಸಂಘ ಫಂಡಿಜೇವಾಳ್ಯ, ಫ್ಲೇವಿಯಾ ಡಿಸೋಜಾ ಮುಖ್ಯೋಪಾಧ್ಯಾಯರು, ದ. ಕ. ಜಿ. ಪಂ. ಹಿ. ಪ್ರಾ. ಶಾಲೆ ಫಂಡಿಜೇವಾಳ್ಯ ಉಪಸ್ಥಿತರಿದ್ದರು.

ರಾಷ್ಟ್ರೀಯ ಸೇವಾ ಯೋಜನೆಯ ಯೋಜನಾಧಿಕಾರಿ ದಿನೇಶ್ ಬಿ. ಕೆ. ಬಳoಜ ತಮ್ಮ ಪ್ರಾಸ್ತಾವಿಕ ಮಾತುಗಳೊಂದಿಗೆ ಎಲ್ಲರನ್ನೂ ಸ್ವಾಗತಿಸಿದರು. ಎನ್. ಎಸ್. ಎಸ್ ಶಿಬಿರಾರ್ಥಿಯಾದ ಅನ್ವಿತಾ ರಾವ್ ಕಾರ್ಯಕ್ರಮ ನಿರೂಪಿಸಿದರು. ಸಂತ ಅಂತೋನಿ ಪದವಿ ಕಾಲೇಜು ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಶರಣ್ಯ ಎಲ್ಲರಿಗೂ ಧನ್ಯವಾದವಿತ್ತರು.

Exit mobile version