Site icon Suddi Belthangady

ಅನ್ವೇಷಣಾ ಕಾಂಟ್ರಾಕ್ಟಿಂಗ್ ಸರ್ವೀಸ್ ಬೆಳ್ತಂಗಡಿಯಲ್ಲಿ ಶುಭಾರಂಭ

ಬೆಳ್ತಂಗಡಿ: ಅನ್ವೇಷಣಾ ಕಾಂಟ್ರಾಕ್ಟಿಂಗ್ ಅಂಡ್ ಸರ್ವೀಸ್‌ನ ನೂತನ ಕಚೇರಿ ಬೆಳ್ತಂಗಡಿ ಚರ್ಚ್ ರೋಡಿನ ಲಕ್ಷಣ ಶಾಪಿಂಗ್ ಸೆಂಟರ್ ಸಮೀಪ ಜ. 22 ರಂದು ಶುಭಾರಂಭಗೊಂಡಿದೆ. ಕಚೇರಿಯನ್ನು ಲಕ್ಷ್ಮಿ ಗ್ರೂಪ್ ಮಾಲಕ ಮೋಹನ್ ಕುಮಾರ್ ದೀಪ ಪ್ರಜ್ವಲಿಸುವ ಮೂಲಕ ಉದ್ಘಾಟಿಸಿದರು.

ಕಾರ್ಯಕ್ರಮದಲ್ಲಿ ಹಿರಿಯ ವಕೀಲ ಬಿ. ಕೆ. ಧನಂಜಯ್ ರಾವ್ ಮಾತನಾಡಿ ಇಂತಹ ಸಂಸ್ಥೆಯ ಅಗತ್ಯತೆ ನಮ್ಮ ಬೆಳ್ತಂಗಡಿಗೆ ಖಂಡಿತಾ ಇದೆ. ಸರಿಯಾದ ಸಮಯಕ್ಕೆ ಉದ್ಯಮವನ್ನು ಪ್ರಾರಂಭಿಸಿದ್ದಾರೆ. ಎಲ್ಲರ ಸಹಕಾರದಿಂದ ಈ ಉದ್ಯಮವು ಯಶಸ್ವಿಯಾಗಲಿ, ಸಂಸ್ಥೆಯು ಉತ್ತಮ ಹೆಸರು ಮಾಡಲಿ ಎಂದು ಶುಭ ನುಡಿಗಳನ್ನಾಡಿದರು.

ಸಂಸ್ಥೆಯ ಸೇವೆಗಳು: ವಾಟರ್ ಟ್ಯಾಂಕ್ ಕ್ಲೀನಿಂಗ್, ಇಂಟರ್ ಲಾಕ್ ಕ್ಲೀನಿಂಗ್, ಕಾಂಪೌಂಡ್ ವಾಷ್, ಪೈಂಟಿಂಗ್ ಕಾಂಟ್ರಾಕ್ಟರ್ ಸರ್ವಿಸ್, ಜನರೇಟ‌ರ್ ರೆಂಟಲ್ ಸರ್ವಿಸ್, ವಾಟರ್ ಲೆವೆಲ್ ಕಂಟ್ರೋಲರ್, ಮೊಬೈಲ್ ಸ್ಟಾರ್ಟರ್, ಕೋರ್ ಕಟ್ಟಿಂಗ್.ಬೆಳ್ತಂಗಡಿ ಕ್ಯಾಥೋಲಿಕ್ ಅಧ್ಯಕ್ಷ ಹೆನ್ರಿ ಲೋಬೋ, ಸಂಸ್ಥೆಯ ಮಾಲೀಕ ಯಶೋಧರ ಮತ್ತು ಮುಖೇಶ್ ಉಪಸ್ಥಿತರಿದ್ದರು.

Exit mobile version