ಅಳದಂಗಡಿ: ಪಿಲ್ಯದಲ್ಲಿರುವ ಗುಡ್ ಫೂಚರ್ ಚೈಲ್ಡ್ ಆಂಗ್ಲ ಮಾಧ್ಯಮ ಶಾಲೆಯು 25 ವರ್ಷ ಪೂರೈಸಿದ ಹಿನ್ನೆಲೆ ರಜತ ಮಹೋತ್ಸವ ಸಮಾರಂಭ ಆಯೋಜನೆ ಮಾಡಿತ್ತು. ಜ. 2 ರಂದು ನಡೆದ ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದಿತ್ತು.
ಸಮಾರೋಪ ಸಮಾರಂಭವನ್ನು ಅಳದಂಗಡಿ ಸತ್ಯದೇವತೆ ದೇವಸ್ಥಾನ ಆಡಳಿತ ಮೊಕ್ತೇಸರ ಶಿವಪ್ರಸಾದ್ ಅಜಿಲರು ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ಖ್ಯಾತ ತುಳು ರಂಗ ಭೂಮಿ ನಟ ಅರವಿಂದ್ ಬೋಳಾರ್ “ವಿದ್ಯಾಸಂಸ್ಥೆ ನಡೆಸಲು ತುಂಬಾ ಕಷ್ಟ ಇದೆ. ಇಂತಹ ವಿದ್ಯಾ ಸಂಸ್ಥೆಗಳಿಗೆ ಸಹಾಯ ಮಾಡುವುದು ನಮ್ಮೆಲ್ಲರ ಧರ್ಮ ಹಾಗೂ ಕರ್ತವ್ಯ. 25 ವರ್ಷ ಪೂರೈಸಿದ ಈ ಸಂಸ್ಥೆ ಇನ್ನಷ್ಟು ಬೆಳಗಲಿ” ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಗುರುವಾಯನಕೆರೆಯ ಎಕ್ಸೆಲ್ ಕಾಲೇಜು ಅಧ್ಯಕ್ಷ ಸುಮಂತ್ ಕುಮಾರ್ ಜೈನ್, ಮಡಂತ್ಯಾರಿನ ಫ್ರೋ ಅಲೆಕ್ಸ್ ಐವಾನ್ ಸೀಕ್ವೆರಾ, ಪದ್ಮಶ್ರೀ ಪುರಸ್ಕೃತ ಅರೆಕಳ ಹಾಜಬ್ಬ, ರಾಜ್ಯ ಸರಕಾರಿ ನೌಕರರ ವಿವಿದ್ದೋದ್ದೇಶ ಸಂಘದ ಅಧ್ಯಕ್ಷ ಜಯಕೀರ್ತಿ ಜೈನ್, ಬೆಳ್ತಂಗಡಿ ಯುವ ಬಿಲ್ಲವ ವೇದಿಕೆಯ ಪ್ರಸಾದ್ ಕೆ. ಎಂ., ಉಪಸ್ಥಿತರಿದ್ದರು. ಸಭಾಧ್ಯಕ್ಷೆತೆಯನ್ನು ಗುಡ್ ಫ್ಯೂಚರ್ ಚೈಲ್ಡ್ ಆಂಗ್ಲ ಮಾಧ್ಯಮ ಶಾಲಾ ಸಂಚಾಲಕ ನಸೀರ್ ಅಹ್ಮದ್ ಖಾನ್ ವಹಿಸಿಕೊಂಡಿದ್ದರು.
ರಜತ ಮಹೋತ್ಸವ ಸಮಿತಿ ಅಧ್ಯಕ್ಷ ಸಾಜಿದ್ ಕೆ. ಕುರಿಯನ್ ಪ್ರಾಸ್ತಾವಿಕ ಮಾತನ್ನಾಡಿ ಬಂದ ಅತಿಥಿಗಳನ್ನು ಸ್ವಾಗತಿಸಿದರು. ಶಾಲೆಯ ಮುಖ್ಯೋಪಾಧ್ಯಾಯ ಪ್ರಭಾಕರ್ ಶೆಟ್ಟಿ ಶಾಲಾ ಪ್ರಗತಿ ವರದಿ ವಾಚನ ಮಾಡಿದರು. ಮೆಲ್ವಿನ್ ವಂದಿಸಿದರು.