Site icon Suddi Belthangady

ಹಿಂದೂಸ್ತಾನಿ ತಾಳವಾದ್ಯ ತಬಲ ಜೂನಿಯರ್ ವಿಭಾಗದ ಪರೀಕ್ಷೆ – ಓಜಸ್ವಿ ಎನ್. ಅತ್ಯುನ್ನತ ಶ್ರೇಣಿ

ಬೆಳ್ತಂಗಡಿ: ಕರ್ನಾಟಕ ರಾಜ್ಯದ ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಕಲೆಗಳ ವಿಶ್ವವಿದ್ಯಾಲಯ ನಡೆಸಿದ 2023 24ನೇ ಹಿಂದೂಸ್ತಾನಿ ತಾಳವಾದ್ಯ ತಬಲ ಜೂನಿಯರ್ ವಿಭಾಗದ ಪರೀಕ್ಷೆಯಲ್ಲಿ ಬೆಳ್ತಂಗಡಿಯ ಓಜಸ್ವಿ ಎನ್. ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿರುತ್ತಾರೆ. ಪುಂಜಾಲಕಟ್ಟೆ ವಿವೇಕ್ ಬಾಳಿಗರ ಶಿಷ್ಯ, ಕಾರ್ಕಳದ ಪ್ರದೀಪ ಉಪಾಧ್ಯಾಯರ ನೇತೃತ್ವದಲ್ಲಿ ಪರೀಕ್ಷೆಯನ್ನು ಕಟ್ಟಿರುತ್ತಾರೆ. ಪ್ರಸ್ತುತ ವಾಣಿ ಕಾಲೇಜಿನ ಕಲಾ ವಿಭಾಗದ ದ್ವಿತೀಯ ವರ್ಷದ ವಿದ್ಯಾರ್ಥಿ. ಮುರಳಿಧರ ಎನ್. ಮತ್ತು ಪೂರ್ಣಿಮಾ ದಂಪತಿಗಳ ಪುತ್ರ.

Exit mobile version