ಬೆಳ್ತಂಗಡಿ: ಪುದುವೆಟ್ಟು ಗ್ರಾಮದ ಮಿಯ್ಯಾರು ಶ್ರೀ ವನದುರ್ಗಾ ದೇವಿ ದೇವಸ್ಥಾನದ ಮುಂದಿನ 3 ವರ್ಷದ ಅವಧಿಗೆ ದೇವಸ್ಥಾನದ ವ್ಯವಸ್ಥಾಪನ ಸಮಿತಿಯನ್ನು ಸರ್ಕಾರ ರಚಿಸಿದೆ. ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾಗಿ ಬೊಮ್ಮಣ್ಣ ಗೌಡ ಸದಸ್ಯರಾಗಿ, ನಾರಾಯಣ ನಾಯ್ಕ, ಶುಭನಿತ, ಹರಿಣಾಕ್ಷಿ, ಜನಾರ್ದನ ಪೂಜಾರಿ, ಸೋಮನಾಥ ಗೌಡ, ಕೆ. ಆರ್. ಶಾಜು, ಸಂತೋಷ್ ಕೆ. ಸಿ., ಪ್ರಧಾನ ಅರ್ಚಕರಾಗಿ ಪಿ. ವಿ. ಈಶ್ವರ ಪ್ರಸಾದ್ ನೇಮಕವಾಗಿದ್ದಾರೆ.
ಅಧ್ಯಕ್ಷರ ನೇಮಕಾತಿ ಪ್ರಕ್ರಿಯೆಯನ್ನು ದೇವಸ್ಥಾನದ ಆಡಳಿತ ಅಧಿಕಾರಿ, ಪುದುವೆಟ್ಟು ಗ್ರಾಮ ಆಡಳಿತ ಅಧಿಕಾರಿ ಸಿದ್ದೇಶ್ ನಡೆಸಿ ನೂತನ ಸಮಿತಿಗೆ ಅಧಿಕಾರ ಹಸ್ತಾಂತರಿಸಿದರು.