Site icon Suddi Belthangady

ಪುಂಜಾಲಕಟ್ಟೆ: ರಾಜ್ಯಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಅಭಿನಂದನಾ ಕಾರ್ಯಕ್ರಮ

ಪುಂಜಾಲಕಟ್ಟೆ: ಬಂಗ್ಲ ಮೈದಾನದಲ್ಲಿ ಯಮತೋ ಶೋಟೋಕಾನ್ ಕರಾಟೆ ಅಸೋಸಿಯೇಷನ್ ಬೆಳ್ತಂಗಡಿ ಆಯೋಜಿಸಿದ ರಾಜ್ಯಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಸುಮಾರು 500 ವಿದ್ಯಾರ್ಥಿಗಳು ಭಾಗವಹಿಸಿ ಉತ್ತಮ ಪ್ರದರ್ಶನ ನೀಡಿದರು. ಶಾಸಕ ರಾಜೇಶ್ ನಾಯಕ್ ಉಳಿಪಾಡಿಗ ಗುತ್ತು ಶುಭ ಹಾರೈಸಿದರು. ಗೌರವಾಧ್ಯಕ್ಷ ತುಂಗಪ್ಪ ಬಂಗೇರ ಮಾತನಾಡಿ ಕರಾಟೆಯು ಪ್ರತಿ ಶಾಲೆಯ ವಿದ್ಯಾರ್ಥಿಗಳು ಅವಶ್ಯಕವಾಗಿ ಕಲಿಯಲು ಸರ್ಕಾರವು ಅನುವು ಮಾಡಿಕೊಡಬೇಕು ಎಂದು ಸರಕಾರಕ್ಕೆ ತಿಳಿಸಿದರು.

ವೇದಿಕೆಯಲ್ಲಿ ಕರಾಟೆ ಮುಖ್ಯ ಶಿಕ್ಷಕ ಶಾಜು ಮಲವಾನ, ರಾಜ್ಯ ಮುಖ್ಯ ಶಿಕ್ಷಕ ನಾರಾಯಣ ಕೆ. ಪೂಜಾರ್ ಹಾವೇರಿ, ರೋಟಾರಿಯನ್ ರಾಘವೇಂದ್ರ ಭಟ್, ಶಿವಪ್ರಸನ್ನ ಆಚಾರ್ಯ, ಶಿವಪ್ರಸಾದ್ ರೈ, ಸುಧಾಕರ್ ಆಚಾರ್ಯ ಬಜಾರ್ ಗ್ರೂಪ್ ಹಾಗೂ ವಿಜಯ ಫೆರ್ನಾಂಡಿಸ್ ಉಪಸ್ಥಿತರಿದ್ದರು.

ಸಮಾರೋಪ ಸಮಾರಂಭದಲ್ಲಿ ಪತ್ರಕರ್ತ ಮನೋಹರ್ ಬಳಂಜ, ಸೇಕ್ ಝಕೀರ್ ಹುಸೇನ್, ಉದಯಕುಮಾರ್, ಪ್ರವೀಣ್ ಕುಮಾರ್ ಕುಡುಮೇ, ಪುಷ್ಪಲತಾ ಮೋಹನ್, ಜೆರಲ್ಡ್ ಫರ್ನಾಂಡಿಸ್, ಪ್ರಕಾಶ್ ಪೂಜಾರಿ ಹಾಗೂ ಜೋಕಿಂ ಪಿಂಟೋ ಉಪಸ್ಥಿತರಿದ್ದರು. ರಾಜ್ಯಮಟ್ಟದಲ್ಲಿ, ರಾಷ್ಟ್ರಮಟ್ಟದಲ್ಲಿ ಭಾಗವಹಿಸಿ ಸಂಸ್ಥೆಯ ಮತ್ತು ಜಿಲ್ಲೆಗೆ ಕೀರ್ತಿಯನ್ನು ತಂದಿರುವಂತಹ 10 ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು. ಮನಿಷಾ ಎಂ. ಕಬೂರ್ ಕಾರ್ಯಕ್ರಮ ನಿರೂಪಿಸಿದರು.

ಈ ಪಂದ್ಯಾಟದ ಆಯೋಜನೆಯನ್ನು ಸೆನ್ಸಾಯ್ ಅಶೋಕಚಾರ್ಯ, ಕೋಚ್ ಮಿಥುನ್ ರಾಜ್, ಸಿಂಚನ ಎಂ. ಡಿ., ಶ್ರವಣ್ ಎಸ್., ಅನಂತ್ ಫ್ರಾನ್ಸಿಸ್ ಸಾಬು, ಶೇಕ್ ಕಲ್ಫಾನ್ ಹುಸೇನ್,
ಪ್ರಜ್ವಲ್ ಆಚಾರ್ಯ, ಜಿತೇಶ್, ಸುಕೇಶ್ ಪೂಜಾರಿ ನಡೆಸಿದರು.

Exit mobile version