ಉಜಿರೆ: ಬೆಳ್ತಂಗಡಿ ತಾಲೂಕು ತುಳು ಶಿವಳ್ಳಿ ಸಭಾ ಮಹಿಳಾ ಘಟಕಕ್ಕೆ ಮುಂದಿನ ಅವಧಿಗೆ ನೂತನ ಪದಾಧಿಕಾರಿಗಳ ಆಯ್ಕೆ ನಡೆದಿದ್ದು ಜ. 26 ರಂದು ಕನ್ಯಾಡಿ ಹರಿಹರಾನುಗ್ರಹ ಸಭಾಭವನದಲ್ಲಿ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ನಡೆಯಲಿದೆ. ಗೌರವ ಮಾರ್ಗದರ್ಶಕರಾಗಿ ಕುಸುಮ ಪಡುವೆಟ್ನಾಯ, ಅಧ್ಯಕ್ಷೆಯಾಗಿ ಜಯಾ ಅನಂತಕೃಷ್ಣ ಅರ್ಮುಡತ್ತಾಯ ಕೊಯ್ಯುರು, ಉಪಾಧ್ಯಕ್ಷೆಯಾಗಿ ವೃಂದ ಪಡುವೆಟ್ನಾಯ, ಗೌರವಾಧ್ಯಕ್ಷೆಯಾಗಿ ಸ್ವರ್ಣ ಶ್ರೀರಂಗ ನೂರಿತ್ತಾಯ, ಪ್ರಧಾನ ಕಾರ್ಯದರ್ಶಿಯಾಗಿ ಅಕ್ಷತಾ ಹೆಬ್ಬಾರ್, ಜತೆ ಕಾರ್ಯದರ್ಶಿಯಾಗಿ ಸುಜಾತ ಜಿ. ಕೆ. ಭಟ್ ಮತ್ತು ರಚನಾ ಕಂಗಿನ್ನಾಯ, ಕೋಶಾಧಿಕಾರಿಯಾಗಿ ಸರೋಜಾ ಕೆದಿಲಾಯ, ಜತೆ ಕೋಶಾಧಿಕಾರಿಯಾಗಿ ಸುಗುಣ ಎಂ. ಕೆ. ಆಚಾರ್, ಸಂಚಾಲಕರಾಗಿ ಶೋಭಾ ಕುದ್ರೆನ್ತಾಯ ಮತ್ತು ಅನ್ನಪೂರ್ಣ ಭಟ್, ಗೌರವ ಸಲಹೆಗಾರರಾಗಿ ಮನೋರಮಾ ತೋಳ್ಪಡಿತ್ತಾಯ, ಅಮಿತ ಪೊಲ್ನಾಯ, ಸುಮಾ ಬೈಪಾಡಿತ್ತಾಯ, ಗಾಯತ್ರಿ ಶ್ರೀಧರ್ ಮತ್ತು ವಾಣಿ ಸಂಪಿಗೆತ್ತಾಯ ಆಯ್ಕೆಯಾಗಿದ್ದಾರೆ.
ಕಾರ್ಯಕಾರಿಣಿ ಸದಸ್ಯರಾಗಿ ಜಯಲಕ್ಷ್ಮಿ ಮತ್ತು ಸೌಮ್ಯ ಹೆಬ್ಬಾರ್(ಕೊಕ್ಕಡ ವಲಯ), ಸೌಮ್ಯ ರಾವ್ ಮತ್ತು ಅಶ್ವಿನಿ ಬಾರಿತ್ತಾಯ(ಉಜಿರೆ ವಲಯ), ವೀಣಾ ಗಿರಿಧರ್ ಮತ್ತು ಸುನೀತಾ ಉಪಾಧ್ಯಾಯ(ಧರ್ಮಸ್ಥಳ ವಲಯ), ಸೌಮ್ಯ ರಾವ್ ಮತ್ತು ಚೇತನಾ(ನಿಡ್ಲೆ ವಲಯ), ಶೋಭಾ ಗಿರಿಧರ್ ಮತ್ತು ಉಮಾ ಹೆಬ್ಬಾರ್(ಅರಸಿನಮಕ್ಕಿ ವಲಯ), ವಿನೀತ ಜೋಗಿತ್ತಾಯ ಮತ್ತು ಪೂರ್ಣಿಮಾ(ಕುವೆಟ್ಟು ವಲಯ), ಅನಿತಾ ಕೆ. ಅಂತರ ಮತ್ತು ಪವಿತ್ರ ಜೋಗಿತ್ತಾಯ(ಮಚ್ಚಿನ ವಲಯ), ವಿಜಯಲಕ್ಷ್ಮಿ ಮತ್ತು ಮಾನಸ ಮಧುಸೂದನ(ಅಳದಂಗಡಿ ವಲಯ) ಹಾಗೂ ಸಾಧನಾ ಪುತ್ರಾಯ ಮತ್ತು ಶಾಂತಲಾ ತಿಲಕ್ (ಬಂದಾರು ವಲಯ) ಆಯ್ಕೆಯಾಗಿದ್ದಾರೆ.