ಉಜಿರೆ: ಹೆಚ್. ಪಿ. ಪೆಟ್ರೋಲ್ ಪಂಪು ಬಳಿ ಶ್ರೀ ಲಕ್ಷ್ಮೀ ವೆಂಕಟೇಶ್ ಕಟ್ಟಡದಲ್ಲಿ ಪ್ರಭಾತ್ ಟ್ರೇಡರ್ಸ್ ಹೊಸ ಆಡಳಿತದೊಂದಿಗೆ ಜ. 19 ರಂದು ಪ್ರಾರಂಭಗೊಂಡಿತು. ಶ್ರೀ ಜನಾರ್ದನ ದೇವಸ್ಥಾನದ ಅನುವಂಶಿಕ ಆಡಳಿತ ಮೋಕ್ತೆಸರ ಶರತ್ ಕೃಷ್ಣ ಪಡುವೆಟನ್ನಾಯ ಉದ್ಘಾಟಿಸಿದರು.
ಅನಂತ ಮೋಹನ ಮುರುಡಿತ್ತಾಯ, ಮಾಜಿ ಸಚಿವ ಕೆ. ಗಂಗಾಧರ ಗೌಡ, ಉದ್ಯಮಿ ರಂಜನ್ ಜಿ. ಗೌಡ, ಪ್ರಭಾತ್ ಸಂಸ್ಥೆಯ ಪುಂಡಲೀಕ ಭಟ್, ಜಿ. ಪ್ರಭಾತ್ ಭಟ್, ಸಂಧ್ಯಾ ಪಿ. ಭಟ್, ಇನ್ನಿತರ ಗಣ್ಯರು, ಗ್ರಾಹಕರು ಭಾಗವಹಿಸಿ ಶುಭ ಹಾರೈಸಿದರು. ಹೇಮಂತ್ ಗೌಡ, ಮನ್ವಿತಾ ಪಿ. ಅತಿಥಿಗಳನ್ನು ಸ್ವಾಗತಿಸಿ ಗೌರವಿಸಿದರು.