Site icon Suddi Belthangady

ಶ್ರೀ ಕ್ಷೇತ್ರ ದೇಲಂಪುರಿ ಶ್ರೀ ಮಹಾದೇವ ಮಹಾಗಣಪತಿ ದೇವಸ್ಥಾನ ವಾರ್ಷಿಕ ಜಾತ್ರೆ – ನವೀಕರಣಗೊಂಡ ಸಭಾಭವನ ಹಾಗೂ ಪಾಕ ಶಾಲೆ, ಭೋಜನ ಶಾಲೆಯ ಲೋಕಾರ್ಪಣೆ

ಕರಿಮಣೇಲು: ಶ್ರೀ ಕ್ಷೇತ್ರ ದೇಲಂಪುರಿ ಶ್ರೀ ಮಹಾದೇವ ಮಹಾಗಣಪತಿ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವ ಜ. 22 ರಿಂದ 24 ರವರೆಗೆ ನಡೆಯಲಿದ್ದು, ಈ ಪ್ರಯುಕ್ತ ನವೀಕರಣಗೊಂಡ ಸಭಾಭವನ ಹಾಗೂ ಹೊಸತಾಗಿ ನಿರ್ಮಿಸಿದ ಪಾಕ ಶಾಲೆ, ಭೋಜನ ಶಾಲೆಯನ್ನು ಜ. 21 ರಂದು ಶಾಸಕ ಹರೀಶ್ ಪೂಂಜ ಲೋಕಾರ್ಪಣೆಗೊಳಿಸಿದರು.

ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಕೃಷ್ಣ ಭಟ್, ಮಹಾದೇವ ಮಹಾಗಣಪತಿ ಭಜನಾ ಮಂಡಳಿ ಅಧ್ಯಕ್ಷ ಜಗದೀಶ್ ನಾಯಕ್, ವೇಣೂರು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಪುರುಷೋತ್ತಮ ಭಟ್, ಅರ್ಚಕರಾದ ಚಂದ್ರಶೇಖರ್ ಅಸ್ರಣ್ಣ , ಶ್ರವಣ್ ಕಾಂತಾಜೆ, ರಾಮದಾಸ್ ನಾಯಕ್, ರಮೇಶ್ ಹೆಗ್ಡೆ ಕುಕ್ಕಾಜೆ, ಜಿನ್ನು ಕರಿಮಣೇಲು, ಹರೀಶ್ ಅಂಚನ್ ಕರಿಮಣೇಲು, ಸಂತೋಷ್ ದೇವಾಡಿಗ, ಗಣೇಶ್ ಭಂಡಾರಿ, ಹರೀಶ್ ದೇವಾಡಿಗ, ಯಶೋಧರ್ ಹೆಗ್ಡೆ, ಗಣೇಶ್ ದೇವಾಡಿಗ, ಯೋಗೀಶ್ ದೇವಾಡಿಗ ಉಪಸ್ಥಿತರಿದ್ದರು.

Exit mobile version