Site icon Suddi Belthangady

ನೆಲ್ಯಾಡಿ: ಸಂತ ಅಲ್ಫೋನ್ಸ ವಾರ್ಷಿಕ ಜಾತ್ರಾ ಮಹೋತ್ಸವಕ್ಕೆ ಭಕ್ತಿ ಪೂರ್ವಕ ಪ್ರಾರಂಭ

ನೆಲ್ಯಾಡಿ: ಕರ್ನಾಟಕ ರಾಜ್ಯದ ಏಕೈಕ ಅಧಿಕೃತ ಸಂತ ಅಲ್ಫೋನ್ಸ ಪುಣ್ಯ ಕ್ಷೇತ್ರ ನೆಲ್ಯಾಡಿಯ ವಾರ್ಷಿಕ ಜಾತ್ರಾ ಮಹೋತ್ಸವಕ್ಕೆ ಜ. 17 ರಂದು ದೇವ ಸಾನಿಧ್ಯದ ಸಂಕೇತವಾಗಿ ಧರ್ಮ ಗುರು ಶಾಜಿ ಮಾತ್ಯು ದ್ವಜಾರೋಹಣ ಮಾಡುವುದರ ಮುಖಾಂತರ ಅಧಿಕೃತ ಆರಂಭ ನೀಡಲಾಯಿತು.

ನವ ದಿನಗಳ ನೋವೇನಾ ಪ್ರಾರ್ಥನೆ ಮತ್ತು ತಿರು ಶೇಷಿಪ್ಪ್ ವಣಕ್ಕಾಗಿ ನೂರರಾರು ಮಂದಿ ಭಕ್ತರು ದಿನಂಪ್ರತಿ ಪ್ರಾರ್ಥನೆಗಳಲ್ಲಿ ಭಾಗಿಯಾಗಲಿದ್ದಾರೆ. ಧರ್ಮ ಪ್ರಾಂತ್ಯದ ಮತ್ತು ಕೇರಳದ ಪ್ರತಿಷ್ಟಿತ ಧಾರ್ಮಿಕ ಶ್ರೇಷ್ಠರು ಪೂಜಾವಿಧಿ ಮತ್ತು ಪ್ರವಚನಗಳಿಗೆ ನೇತೃತ್ವ ನೀಡಲಿದ್ದಾರೆ. ಜ. 23 ರಂದು ವಾಹನಗಳ ಆಶೀರ್ವಾದ ನಡೆಯಲಿದೆ. ಮೃತರಿಗಾಗಿ ಸಂಜೆ ಪ್ರಾರ್ಥನೆ ನಡೆಯಲಿದೆ. ಜ. 25 ರಂದು ಸಂಜೆ 4.30 ರಿಂದ ಬಲಿಪೂಜೆ, ಸೌಖ್ಯ ಆರಾಧನೆ, ಪ್ರವಚನ, ಆಕ್ಷೇರ್ಷಕ ಮೆರವಣಿಗೆ, ಕೇರಳದ ಸಾಂಸ್ಕೃತಿಕ ತಂಡದಿಂದ ವೈಭವದ ಸಂಗೀತ ಹಾಸ್ಯರಸ, ಸಂಜೆ ಡ್ರೋನ್ ಶೋ, ಬ್ಯಾಂಡ್ ಸೆಟ್, ನಾಸಿಕ್ ಬ್ಯಾಂಡ್ ಸಂಗೀತ ಪ್ರದರ್ಶನ, ಅನ್ನಸಂತರ್ಪಣೆ ನಡೆಯಲಿದೆ.

ಜ. 26 ರಂದು 9.30 ಕ್ಕೆ ನಡೆಯುವ ರಾಸ ಬಲಿಪೂಜೆಯೊಂದಿಗೆ ಹಬ್ಬಕ್ಕೆ ತೆರೆ ಬೀಳಲಿದೆ.

Exit mobile version