ಪಜಿರಡ್ಕ: ನೂತನ ಪುಷ್ಪರಥದ ಭವ್ಯ ಶೋಭಾಯಾತ್ರೆಯು ಫೆ. 03 ರಂದು ಬೆಳಿಗ್ಗೆ 10.00 ಗಂಟೆಗೆ ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ರಥಬೀದಿಯಿಂದ ಶ್ರೀ ಕ್ಷೇತ್ರ ಪಜಿರಡ್ಕಕ್ಕೆ ನಡೆಯಲಿದೆ.
ಮೆರವಣಿಗೆಯಲ್ಲಿ ವಾದ್ಯ, ಚೆಂಡೆ. ಕಲ್ಕಂಜ ಗ್ರಾಮದ ವಿವಿಧ ಭಜನಾ ತಂಡಗಳು ಭಾಗವಹಿಸಲಿವೆ. ಈ ಮೆರವಣಿಗೆಯೊಂದಿಗೆ ದೇವಸ್ಥಾನಕ್ಕೆ ಹಸಿರುವಾಣಿ ಹೊರೆಕಾಣಿಕೆ ಸಮರ್ಪಿಸುವವರು ಸೇರಿಕೊಳ್ಳುವುದು.