ಅರಸಿನಮಕ್ಕಿ: ಮೂಲ್ಯರ ಯಾನೆ ಕುಲಾಲರ ಕೂಟದಿಂದ
ಮಲ್ಲ ಚಾವಡಿ ಪರ್ಬ ಬೊಕ್ಕ ತಮ್ಮನದ ಗಮ್ಮತ್ ಅಂಚನೆ ಬೂಕು ಪಟ್ಟುನ ಲೇಸ್ ಕಾರ್ಯಕ್ರಮ ಜ. 19 ರಂದು ಕುಂಭಶ್ರೀ ಚಾವಡಿ ಅರಸಿನಮಕ್ಕಿಯಲ್ಲಿ ನೆರವೇರಿತು.
ಸಂಘದ ಅಧ್ಯಕ್ಷ ಕೆ. ಗಂಗಾಧರ ಕುಲಾಲ್ ಅಧ್ಯಕ್ಷತೆಯಲ್ಲಿ ನಡೆದ ಸಭಾ ಕಾರ್ಯಕ್ರಮದ ದೀಪ ಪ್ರಜ್ವಲನೆಯನ್ನು ಅತಿಥಿಗಳು ನೆರವೇರಿಸಿದರು.
ಅಳದಂಗಡಿ ಸರಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಸದಾನಂದ ಕುಲಾಲ್, ನಿವೃತ ಕಂದಾಯ ನಿರೀಕ್ಷಿಕ ಹೆಚ್. ಪದ್ಮಕುಮಾರ್ ಸಂಘದ ಹಿರಿಯರಾದ ದೂಮ ಮೂಲ್ಯ, ಕಟ್ಟಡ ನಿಧಿಯ ಅಧ್ಯಕ್ಷ ಕೃಷ್ಣಪ್ಪ ಕೆ., ಸಂಘದ ವಿದ್ಯಾನಿಧಿಯ ಅಧ್ಯಕ್ಷ ಕೃಷ್ಣಪ್ಪ ಯು. ಎನ್., ಮಹಿಳಾ ಕೂಟದ ಅಧ್ಯಕ್ಷೆ ಧನವಂತಿ ನಾಗೇಶ್ ಕುಲಾಲ್, ಕ್ರೀಡಾ ಕೂಟದ ಅಧ್ಯಕ್ಷ ಹರೀಶ್ ಕುಲಾಲ್ ಹಾಗೂ ಸಂಘದ ಪದಾಧಿಕಾರಿಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಮತ್ತು ಹಿರಿಯರಿಗೆ ಬಹುಮಾನ ವಿತರಣೆ ನಡೆಯಿತು. ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ಪುಸ್ತಕ ಹಂಚಿಕೆ ನಡೆಯಿತು.
ಕಾರ್ಯಕ್ರಮದಲ್ಲಿ ಪ್ರಾರ್ಥನೆಯನ್ನು ಧನಿಕ್ಷಾ ಮತ್ತು ಹೃತ್ವಿಕ್ ಪಲಸ್ತಡ್ಕ, ಸ್ವಾಗತವನ್ನು ಸಂಘದ ಕಾರ್ಯದರ್ಶಿ ಹೃಶಿಕೇಶ್ ಕುಲಾಲ್, ನಿರೂಪಣೆಯನ್ನು ಸಂಘದ ಪ್ರದಾನ ಕಾರ್ಯದರ್ಶಿ ಯು. ಸಿ. ಕುಲಾಲ್ ಮತ್ತು ಹೇಮಾವತಿ ಕುಲಾಲ್ ನೆರವೇರಿಸಿದರು.
ಸಂಘದ ವಾರ್ಷಿಕ ಲೆಕ್ಕಾಚಾರವನ್ನು ತೇಜಸ್ವಿ ಅಭಿಲಾಶ್ ಕುಲಾಲ್, ಧನ್ಯವಾದವನ್ನು ಅಶೋಕ್ ಕುಲಾಲ್ ನೆರವೇರಿಸಿದರು.