Site icon Suddi Belthangady

ಬೆಳ್ತಂಗಡಿ ಸಾರ್ವಜನಿಕ ಆಸ್ಪತ್ರೆ ವೈದ್ಯರನ್ನು ತರಾಟೆಗೆತ್ತಿಕೊಂಡ ಸಚಿವ ದಿನೇಶ್‌ ಗುಂಡುರಾವ್‌

ಬೆಳ್ತಂಗಡಿ: ತಾಲೂಕು ಆಸ್ಪತ್ರೆಯಲ್ಲಿ ಎಲ್ಲಾ ವ್ಯವಸ್ಥೆ ಇದ್ದರೂ ಯಾಕೆ ತಿಂಗಳಿಗೆ ಕೇವಲ 15 ಅಷ್ಟೇ ಹೆರಿಗೆ ಆಗುತ್ತಿದೆ. ಉಚಿತ ಹೆರಿಗೆ ವ್ಯವಸ್ಥೆ ಇದ್ದರೂ ಯಾಕೆ ಜನ ಬರುತ್ತಿಲ್ಲ, ಅನಸ್ತೇಷಿಯಾ ಸ್ಪೆಷಲಿಷ್ಟ್‌ ಇದ್ದು ಇಷ್ಟು ಕಡಿಮೆ ಹೆರಿಗೆ ಆದರೆ ಅವರಿಗೆ ನಾವು ಯಾಕೆ ಸುಮ್ಮನೆ ಸಂಬಳ ಕೊಡಬೇಕು.

ಸ್ರ್ತಿರೋಗ ತಜ್ಞರು ಯಾಕೆ ಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ ಸಚಿವ ದಿನೇಶ್‌ ಗುಂಡೂರಾವ್‌ ಬೆಳ್ತಂಗಡಿ ತಾಲೂಕು ಸಾರ್ವಜನಿಕ ಆಸ್ಪತ್ರೆಯ ವೈದ್ಯಾಧಿಕಾರಿಗಳನ್ನು ತರಾಟೆಗೆ ತೆಗದುಕೊಂಡ‌ ಘಟನೆ ಜ.18 ರಂದು ನಡೆದಿದೆ.

ಬೆಳ್ತಂಗಡಿ ಸಾರ್ವಜನಿಕ ಆಸ್ಪತ್ರೆಯ ಅಭಿವೃದ್ಧಿ ಕಾಮಗಾರಿಗಳ ಶಂಕು ಸ್ಥಾಪನೆ ಹಾಗೂ ಆರೋಗ್ಯ ಪ್ರಯೋಗಾಲಯ ಕೇಂದ್ರ ಉದ್ಘಾಟಿಸಿದ ಸಚಿವರು ಆಸ್ಪತ್ರೆಯ ಸ್ತ್ರೀರೋಗ ತಜ್ಞೆ ಹಾಗೂ ವೈದ್ಯಕೀಯ ಅಧಿಕಾರಿ ಜೊತೆ ಆಸ್ಪತ್ರೆಯ ಕಾರ್ಯ ಚಟುವಟಿಕೆಗಳ ಬಗ್ಗೆ ವಿಚಾರಣೆ ನಡೆಸಿ ಮಾತಿನ ಚಾಟಿ ಬೀಸಿದ್ದಾರೆ.

ಅದೇ ರೀತಿ ಎಂ. ಬಿ. ಬಿ. ಎಸ್‌ ವೈದ್ಯರ ನೇಮಕ ಆಗಬೇಕು, ಕ್ಯಾಶುವಲಿಟಿ ಮೆಡಿಕಲ್‌ ಅಧಿಕಾರಿಗಳ ನೇಮಕ ಆಗಬೇಕು. ಎಂದು ಟಿ. ಎಚ್‌. ಓ. ಗೆ ತಾಕೀತು ಮಾಡಿದರು.
ಶಾಸಕ ಹರೀಶ್‌ ಪೂಂಜ, ಬೆಸ್ಟ್‌ ಫೌಂಡೇಶನ್‌ ಅಧ್ಯಕ್ಷ ರಕ್ಷಿತ್‌ ಶಿವರಾಂ, ಮಾಜಿ ವಿಧಾನ ಪರಿಷತ್‌ ಸದಸ್ಯ ಹರೀಶ್‌ ಕುಮಾರ್‌ ಮತ್ತಿತರರು ಉಪಸ್ಥಿತರಿದ್ದರು.

Exit mobile version