Site icon Suddi Belthangady

ಕರ್ನಾಟಕ ರಾಜ್ಯ ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷರಿಗೆ ಜೈನ ಸಮುದಾಯದ ಮನವಿ

ಬೆಳ್ತಂಗಡಿ: ಕರ್ನಾಟಕ ರಾಜ್ಯ ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷರಾದ ನಿಸಾರ್ ಅಹಮ್ಮದ್ ರವರಿಗೆ ದ. ಕ.ಜಿಲ್ಲಾಧಿಕಾರಿಗಳ ಸಭಾಭವನದಲ್ಲಿ ನಡೆದ ಅಲ್ಪಸಂಖ್ಯಾತರ ಸಮಾಲೋಚನಾ ಸಭೆಯಲ್ಲಿ ಹಲವಾರು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಮನವಿಯನ್ನು ನೀಡಲಾಯಿತು.

ಪ್ರಮುಖವಾಗಿ ದ. ಕ. ಜಿಲ್ಲೆಯಲ್ಲಿ ಸಸ್ಯಹಾರಿ ವಿದ್ಯಾರ್ಥಿ ನಿಲಯಗಳನ್ನು ಪ್ರಾರಂಭಿಸುದು, ಜೈನ ಪುರೋಹಿತರಿಗೆ ಗೌರವಧನ ನೀಡುವುದು, ಬಸದಿಗಳಿಗೆ ಮೂಲಭೂತ ಸೌಕರ್ಯಗಳನ್ನು ನೀಡುವುದು, ಬಸದಿಗಳಿಗೆ ಸೋಲಾರ್ ವ್ಯವಸ್ಥೆಯನ್ನು ಅಳವಡಿಸುದು, ಜೈನ ಸಮುದಾಯದ ಸ್ಮಶಾನ ಅಭಿವೃದ್ಧಿ, ವಸತಿ ರಹಿತ ಸಮುದಾಯದವರಿಗೆ ಅನುದಾನ ನೀಡುವುದು ಮುಂತಾದ ಹಲವಾರು ಬೇಡಿಕೆಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.

ಈ ಸಂದರ್ಭದಲ್ಲಿ ಧರ್ಮಸ್ಥಳದ ಡಾ. ಕೆ. ಜಯಕೀರ್ತಿ ಜೈನ್, ಅರಿಹಂತ ಜೈನ್ ಅಳದಂಗಡಿ, ನೇಮಿರಾಜ್ ಜೈನ್ ಕಾರ್ಕಳ, ಪುಷ್ಪರಾಜ್ ಜೈನ್ ಮಂಗಳೂರು, ರತ್ನಾಕರ್ ಜೈನ್ ಮಂಗಳೂರು ಉಪಸ್ಥಿತರಿದ್ದರು.

Exit mobile version