Site icon Suddi Belthangady

ಇಳಂತಿಲ: ನಾಯಿಮಾರು ನಿವಾಸಿ ವಾರಿಜಾ ನಿಧನ

ಇಳಂತಿಲ: ನಾಯಿಮಾರು ನಿವಾಸಿ, ವಾರಿಜಾ (61ವ) ಅಲ್ಪಕಾಲದ ಅಸೌಖ್ಯದಿಂದ ಜ. 17 ರಂದು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ನಿಧನರಾದರು.

ಮೃತರು ಪತಿ ಕೃಷ್ಣಪ್ಪ ಗೌಡ, ಮಗ ಧರ್ಣಪ್ಪ ಗೌಡ, ಪುತ್ರಿಯರಾದ ಇಂದಿರಾ, ಸಾವಿತ್ರಿ, ಲೀಲಾವತಿ ಇವರನ್ನು ಅಗಲಿದ್ದಾರೆ.

ನ್ಯಾಯವಾದಿ ಕೆ. ಗೋಪಾಲಕೃಷ್ಣ ಭಟ್, ಇಳಂತಿಲ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಮನೋಹರ್ ಕುಮಾರ್, ಮಾಜಿ ಸದಸ್ಯ ತಿಮ್ಮಪ್ಪ ಗೌಡ ಬೋಲ್ಜೆ ಮುಂತಾದವರು ಮೃತರ ಅಂತಿಮ ದರ್ಶನಗೈದರು.

Exit mobile version