Site icon Suddi Belthangady

ಉಪ್ಪಿನಂಗಡಿ – ಮಡಂತ್ಯಾರು ಮಾರ್ಗದಲ್ಲಿ ರಾಜ್ಯ ಸಾರಿಗೆ ಸಂಸ್ಥೆ ಬಸ್ ಬಿಡುವಂತೆ ಆಗ್ರಹಿಸಿ ಅಧಿಕಾರಿಗಳನ್ನು ಭೇಟಿಯಾದ ಎಸ್‌. ಡಿ. ಪಿ. ಐ ನಿಯೋಗ

ಬೆಳ್ತಂಗಡಿ: ಉಪ್ಪಿನಂಗಡಿ – ಮಡಂತ್ಯಾರ್ ರಸ್ತೆಯಲ್ಲಿ ಕೆ. ಎಸ್‌. ಆರ್‌. ಟಿ. ಸಿ ಬಸ್‌ ಸೌಕರ್ಯವಿಲ್ಲದ ಕಾರಣ ವಿಧ್ಯಾರ್ಥಿಗಳು, ಕೂಲಿ ಕಾರ್ಮಿಕರು, ಉದ್ಯೋಗಸ್ಥರು ತುಂಬಾ ಅನಾನುಕೂಲ ಅನುಭವಿಸುತ್ತಿದ್ದು, ಇದನ್ನು ನಿವಾರಿಸಲು ಉಪ್ಪಿನಂಗಡಿ – ಮಡಂತ್ಯಾರ್ ರಸ್ತೆಯಲ್ಲಿ ಸರ್ಕಾರಿ ಬಸ್ಸುಗಳನ್ನು ಪ್ರಾರಂಭಿಸಿ ಸುಮಾರು ವರ್ಷಗಳಿಂದ ಇರುವ ಪ್ರಯಾಣಿಕರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಿ ಎಂದು ಒತ್ತಾಯಿಸಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಕಣಿಯೂರು ಬ್ಲಾಕ್ ಸಮಿತಿ ನಿಯೋಗ ರಾಜ್ಯ ಸಾರಿಗೆ ಅಧಿಕಾರಿಗಳನ್ನು ಜ. 16 ರಂದು ಭೇಟಿಯಾಗಿ ಮನವಿ ಸಲ್ಲಿಸಿದರು.

ಎಸ್‌. ಡಿ. ಪಿ. ಐ ಕಣಿಯೂರು ಬ್ಲಾಕ್ ಅಧ್ಯಕ್ಷ ಮುಸ್ತಫ ಬಂಗೇರಕಟ್ಟೆ, ಕೋಶಾಧಿಕಾರಿ ಫೈಝಲ್ ಮೂರುಗೋಳಿ, ಬ್ಲಾಕ್ ಸಮಿತಿ ಸದಸ್ಯ ಬಿ. ಎಂ. ರಝಾಕ್, ನೌಶಾದ್ ತೆಕ್ಕಾರ್ ಹಾಗೂ ಅಶ್ರಫ್ ಕಲ್ಲೇರಿ ಉಪಸ್ಥಿತರಿದ್ದರು.

Exit mobile version