ಕಳೆಂಜ: ಬಂಡೇರಿ ಸೇತುವೆ ಬಳಿ ಕಾಡಾನೆ ದಾಳಿ ನಡೆಸಿ ವಿಶ್ವನಾಥ ಕುಂಬಾರ ಗಾಯಗೊಂಡ ಘಟನೆ ನಡೆದಿದೆ. ಜ. 12 ರಂದು ಕಳೆಂಜ ಗ್ರಾಮದ ಗೋಶಾಲೆ ಮಾರ್ಗದ ಸಮೀಪದ ಮನೆಯ ವಿಶ್ವನಾಥ ಕುಂಬಾರರು ಮನೆಯಲ್ಲಿ ಮೊಬೈಲ್ ನೆಟ್ವರ್ಕ್ ಸಿಗದ ಕಾರಣ ಪಕ್ಕದಲ್ಲಿರುವ ಬಂಡೇರಿ ಸೇತುವೆ ಬಳಿ ಫೋನಿನಲ್ಲಿ ಮಾತನಾಡಲೆಂದು ಕುಳಿತಿದ್ದ ಸಂದರ್ಭ, ಒಂಟಿ ಸಲಗವೊಂದು ಇವರನ್ನು ಸೊಂಡಿಲಿನಿಂದ ತಳ್ಳಿ ಹಾಕಿದ್ದು ಸಣ್ಣ ಪುಟ್ಟ ಗಾಯಗಳಿಂದ ಅದೃಷ್ಟವಶಾತ್ ಪಾರಾಗಿದ್ದಾರೆ. ವಿಶ್ವನಾಥ್ ರವರಿಗೆ ಕಿವಿ ಸರಿಯಾಗಿ ಕೇಳಿಸದೇ ಇರುವುದು ಘಟನೆಗೆ ಕಾರಣವಾಗಿದ್ದು, ಘಟನೆ ಬಳಿಕ ಸ್ಥಳೀಯರು ಸ್ಥಳದಲ್ಲಿ ಜಮಾಯಿಸಿ ಆನೆಯನ್ನು ಕಾಡಿಗೆ ಅಟ್ಟಿದ್ದಾರೆ. ಅರಣ್ಯ ಇಲಾಖೆಯವರು ಸ್ಥಳಕ್ಕೆ ಆಗಮಿಸಿ ಸಂತ್ರಸ್ತರಿಗೆ ಸೂಕ್ತ ಮಾರ್ಗದರ್ಶನ ನೀಡಬೇಕೆಂದು ಸ್ಥಳೀಯರು ಒತ್ತಾಯಿಸುತ್ತಿದ್ದಾರೆ.
ಕಳೆಂಜ: ಬಂಡೇರಿ ಸೇತುವೆ ಬಳಿ ಆನೆ ದಾಳಿ – ವಿಶ್ವನಾಥ ಕುಂಬಾರರಿಗೆ ಗಾಯ
