Site icon Suddi Belthangady

ಮೊಗ್ರು: ಮುಗೇರಡ್ಕ ದೈವಸ್ಥಾನದಲ್ಲಿ ಕುಡಿಯುವ ನೀರಿನ ಘಟಕ ಉದ್ಘಾಟನೆ

ಮೊಗ್ರು: ಶ್ರೀ ಕ್ಷೇತ್ರ ಮುಗೇರಡ್ಕ ದೈವಸ್ಥಾನಕ್ಕೆ ಬರುವ ಭಕ್ತಾದಿಗಳಿಗೆ ಶುದ್ಧ ಕುಡಿಯುವ ಮತ್ತು ಬಿಸಿ ನೀರಿನ ವ್ಯವಸ್ಥೆಯ ಯಂತ್ರವನ್ನು ಮೊಗ್ರು ಗ್ರಾಮದ ಪರಾರಿ ಮನೆ ಜಯಂತಿ ಮತ್ತು ಸುಂದರ ಗೌಡ ಮತ್ತು ಮಕ್ಕಳು ಕೊಡುಗೆಯಾಗಿ ನೀಡಿರುತ್ತಾರೆ.

ಈ ನೀರಿನ ಘಟಕವನ್ನು ಜ. 14 ಮಕರ ಸಂಕ್ರಮಣ ದಿನ ಮುಗೇರಡ್ಕ ದೈವಸ್ಥಾನದ ಗುತ್ತು ಮನೆಯ ಡಿ. ರಾಮಣ್ಣ ಗೌಡ ಉದ್ಘಾಟನೆ ಮಾಡಿದರು. ಮನೋಹರ್ ಅಂತರ, ಜಯಂತಿ ಮತ್ತು ಸುಂದರ ಗೌಡ ಪರಾರಿ ಮನೆ, ಸಹೋದರರಾದ ಸಾಂತಪ್ಪ ಗೌಡ ಮುಗೇರಡ್ಕ, ಚಂದ್ರಶೇಖರ ಮುಗೇರಡ್ಕ, ಸುಧಾಕರ್ ಗೌಡ ನೈಮಾರು, ರಾಮಣ್ಣ ಗೌಡ ಎರ್ಮಲ, ಕೇಶವ ಗೌಡ ಜಾಲ್ನಡೆ, ವೀರಪ್ಪ ಗೌಡ, ಕಿನ್ಯಣ್ಣ ಬರುಂಗುಡೆಲು, ಚಂದಪ್ಪ ದoಬೆತ್ತಿಮಾರು ಕೊರಗಪ್ಪ ಗೌಡ ಪುಣ್ಕೆತಡಿ ಹಾಗೂ ಗ್ರಾ. ಪಂ. ಸದಸ್ಯರಾದ ಬಾಲಕೃಷ್ಣ ಗೌಡ ಮುಗೇರಡ್ಕ, ಗಂಗಾಧರ ಪೂಜಾರಿ ದoಬೆತ್ತಿಮಾರು ಮತ್ತು ಗ್ರಾಮದ ಸಮಸ್ತ ಭಕ್ತಾಭಿಮಾನಿಗಳು ಉಪಸ್ಥಿತರಿದ್ದರು.

Exit mobile version