Site icon Suddi Belthangady

ದ್ವಿಚಕ್ರ ವಾಹನ ನಿಯಂತ್ರಣ ತಪ್ಪಿ ಧರ್ಮಸ್ಥಳದ ಯುವಕ ಸಾವು

ಧರ್ಮಸ್ಥಳ: ಗ್ರಾಮದ ಮುಂಡ್ರುಪಾಡಿಯ ಪಾಪುದಡ್ಕ ನಿವಾಸಿ ಮಿಥುನ್ ಕರ್ಕೇರ(25) ದ್ವಿಚಕ್ರ ವಾಹನದಲ್ಲಿ ಸಂಚರಿಸುತ್ತಿರುವ ವೇಳೆ ಆಕಸ್ಮಿಕವಾಗಿ ನಿಯಂತ್ರಣ ತಪ್ಪಿ ಸಾವನ್ನಪ್ಪಿರುವ ಘಟನೆ ಜ. 16 ರಂದು ತಡರಾತ್ರಿ ನಡೆದಿದೆ.

ಯಾವುದೋ ಸಮಾರಂಭ ಕಾರ್ಯಕ್ರಮಕ್ಕೆಂದು ಮಂಗಳೂರಿನಿಂದ ಬಂದ ಯುವಕ ಕಲ್ಮಂಜ ನಿಡಿಗಲ್ ಸಮೀಪ ಬೈಕ್ ಸ್ಕಿಡ್ ಆಗಿ ರೋಡಿಗೆ ಬಿದ್ದು ತಲೆಬಾಗಕ್ಕೆ ಗಂಭೀರ ಗಾಯವಾಗಿದ್ದು, ತಕ್ಷಣ ಉಜಿರೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ. ಮೃತರು ಖಾಸಗಿ ಬಸ್ ಮತ್ತು ಆಟೋ ಚಾಲಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ತಂದೆ ನಾರಾಯಣ ಪೂಜಾರಿ ಹಾಗೂ ತಾಯಿ ಮತ್ತು ಸಹೋದರಿಯನ್ನು ಅಗಲಿದ್ದಾರೆ.
ಘಟನೆಯನ್ನು ತಿಳಿದ ಮನೆಯವರ ಹಾಗೂ ಕುಟುಂಬದ ಆಕ್ರಂದನ ಮುಗಿಲು ಮುಟ್ಟಿದೆ. ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಬೆಳ್ತಂಗಡಿ ಸರ್ಕಾರಿ ಆಸ್ಪತ್ರೆಯಲ್ಲಿ ಇರಿಸಲಾಗಿದೆ.

Exit mobile version