Site icon Suddi Belthangady

ಮಚ್ಚಿನ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ತಾಲೂಕು ಆಸ್ಪತ್ರೆಯ 5 ಕೋಟಿ ರೂ. ವೆಚ್ಚದ ಕಾಮಗಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವರಿಂದ ಜ. 18 ರಂದು ಶಿಲಾನ್ಯಾಸ

ಬೆಳ್ತಂಗಡಿ: ವಿಧಾನಸಭಾ ಕ್ಷೇತ್ರದ ಮಚ್ಚಿನ ಪ್ರಾಥಮಿಕ ಆರೋಗ್ಯ ಕೇಂದ್ರದ 4 ಕೋಟಿ 60 ಲಕ್ಷ ರೂ. ವೆಚ್ಚದ ನೂತನ ಕಟ್ಟಡ ನಿರ್ಮಾಣ ಮತ್ತು ಸಿಬ್ಬಂದಿ ವಸತಿ ಗೃಹ ಕಾಮಗಾರಿ ಹಾಗೂ ಬೆಳ್ತಂಗಡಿ ತಾಲೂಕು ಆಸ್ಪತ್ರೆಯಲ್ಲಿ 40 ಲಕ್ಷ ರೂ. ವೆಚ್ಚದಲ್ಲಿ ನಡೆಯುವ ಮೂಲಭೂತ ಸೌಕರ್ಯ ಹಾಗೂ ಉನ್ನತಿಕರಣ ಕಾಮಗಾರಿಯ ಶಿಲನ್ಯಾಸವನ್ನು ಜ.18 ರಂದು ಆರೋಗ್ಯ ಮತ್ತು‌‌ ಕುಟುಂಬ ಕಲ್ಯಾಣ ಖಾತೆಯ ಸಚಿವ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ನೆರವೇರಿಸಲಿದ್ದಾರೆ.

ಆಸ್ಪತ್ರೆಯಲ್ಲಿನ ಸಾರ್ವಜನಿಕ ಪ್ರಯೋಗಾಲಯ ಕಟ್ಟಡದ ಉದ್ಘಾಟನೆ, ತಾಲೂಕು ಆಸ್ಪತ್ರೆಯಲ್ಲಿನ 12 ಬೆಡ್ ಗಳ ಐಸೋಲೇಶನ್ ವಾರ್ಡ್ ಕಟ್ಟಡ ಲೋಕಾರ್ಪಣೆ ಮಾಡಲಿದ್ದಾರೆ. ಎಂದು ಕೆ.ಪಿ.ಸಿ.ಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ತಿಳಿಸಿದ್ದಾರೆ.

Exit mobile version