ಮರೋಡಿ: ಅಬುಸ್ವಾಲಿಕ್ ಜ. 15 ರಂದು ಅಲ್ಪಕಾಲದ ಅಸೌಖ್ಯದಿಂದ ನಿಧನರಾಗಿದ್ದಾರೆ. ಜಿಲ್ಲಾ ವಕ್ಸ್ ಸಲಹಾ ಸಮಿತಿಯ ಉಪಾಧ್ಯಕ್ಷರೂ, ಕಾಶಿಪಟ್ಟ ದಾರುನ್ನೂರ್ ಸಂಸ್ಥೆಯ ಪಿ. ಟಿ. ಎ. ಅಧ್ಯಕ್ಷರೂ ಆದ ಫಕೀರಬ್ಬ ಮಾಸ್ಟರ್ ಅವರ ತಂದೆ ಅನ್ಸಾಲಿಯಾಕ ಮರೋಡಿ ಗ್ರಾಮ ಪಂಚಾಯತ್ ನ ಮಾಜಿ ಸದಸ್ಯ. ಮರೋಡಿಯಲ್ಲಿ ಸುದೀರ್ಘ ವರ್ಷಗಳಲ್ಲಿ ಅಂಗಡಿ ವ್ಯಾಪಾರದ ಮೂಲಕ ಜನಪ್ರಿಯರಾಗಿದ್ದು, ಸಾಮಾಜಿಕ ಸೇವೆಯಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದರು. ಜುಮ್ಮಾ ಮಸೀದಿಯ ದಫನ ಭೂಮಿಯಲ್ಲಿ ದಫನ ಕಾರ್ಯ ನಡೆಯಲಿದೆ.