ನಿಡ್ಲೆ: ಹತ್ಯಡ್ಕ ಪ್ರಾಥಮಿಕ ಸಂಘದ ಚುನಾವಣೆ ಜ.15 ರಂದು ನಡೆದಿದ್ದು, ಮತ ಎಣಿಕೆಯಲ್ಲಿ ಸಹಕಾರ ಭಾರತಿ ಅಭ್ಯರ್ಥಿಗಳು 12 ರಲ್ಲಿ 12 ಸ್ಥಾನಗಳಲ್ಲಿ ಜಯ ಸಾಧಿಸಿದ್ದು, ಸಹಕಾರ ಭಾರತಿಯ ಅಭ್ಯರ್ಥಿಗಳಲ್ಲಿ ಸಾಮಾನ್ಯ ಕ್ಷೇತ್ರದಿಂದ ಕೆ. ರಮೇಶ್ ರಾವ್, ಧನಂಜಯ ಗೌಡ, ವಿಜಯ್, ಜಯರಾಮ, ಆನಂದಗೌಡ, ಕೆ. ಹೇಮಂತ ಗೌಡ, ಸಾಮಾನ್ಯ ಮಹಿಳೆ ಕ್ಷೇತ್ರದಿಂದ ಗಾಯತ್ರಿ ಹೆಚ್., ವಿಜಯಲಕ್ಷ್ಮಿ ಕೆ., ಪರಿಶಿಷ್ಟ ಜಾತಿಯಿಂದ ರಾಜು, ಪರಿಶಿಷ್ಟ ಪಂಗಡದಿಂದ ಡೀಕಯ್ಯ ಎಂ. ಕೆ., ಹಿಂದುಳಿದ ವರ್ಗ ಬಿ ಯಿಂದ ಧನಂಜಯ ಬಿ., ಹಿಂದುಳಿದ ವರ್ಗ ಎ ಯಿಂದ ಮೋಹನ ಪೂಜಾರಿ ಜಯ ಸಾಧಿಸಿದ್ದಾರೆ.