Site icon Suddi Belthangady

ಬುರೂಜ್ ಶಾಲೆ: ಪ್ರಶಸ್ತಿ ವಿತರಣಾ ಸಮಾರಂಭ

ರಝಾನಗರ: ಬುರೂಜ್ ಆಂಗ್ಲ ಮಾಧ್ಯಮ ಪ್ರೌಢಶಾಲೆ ಮೂಡುಪಡುಕೋಡಿಯಲ್ಲಿ ಸಿಲ್ವರ್ ಗ್ರಾಟಿಟ್ಯೂಡ್ ಗಾಲ ಪ್ರಯುಕ್ತ ಆಯೋಜಿಸಿದ್ದ ಪ್ರಶಸ್ತಿ ವಿತರಣಾ ಸಮಾರಂಭದ ಉದ್ಘಾಟನೆಯನ್ನು ಶ್ರೀ ಉಮಾಮಹೇಶ್ವರ ಸ್ವ ಪರಿವಾರ ದೇವಸ್ಥಾನ ಕಜೆಕೋಡಿ ಅಧ್ಯಕ್ಷ ಚಂದ್ರಶೇಖರ ಭಟ್ ನೆರವೇರಿಸಿದರು.

ಶಾಲಾ ವಿದ್ಯಾರ್ಥಿಗಳ ಪ್ರಾರ್ಥನೆ ಮೂಲಕ ಕಾರ್ಯಕ್ರಮ ಆರಂಭವಾಯಿತು. ಅಧ್ಯಕ್ಷತೆಯನ್ನು ಶಾಲಾ ಸಂಚಾಲಕ ಶೇಖ್ ರಹ್ಮತ್ತುಲ್ಲಾಹ್ ವಹಿಸಿದ್ದರು. ಪ್ರಶಸ್ತಿ ವಿತರಕ ಎಂ. ಸಿ. ಟಿ. ಪಬ್ಲಿಕ್ ಸ್ಕೂಲ್ ಉಪಾಧ್ಯಕ್ಷ ಮತ್ತು ಟ್ರ‌ಸ್ಟಿ ಅಡ್ವೊಕೇಟ್ ಉಮರ್ ಫಾರೂಕ್ ಮಾತಾಡಿ ಶಾಲಾ ಸಂಚಾಲಕ ಹಾದು ಬಂದ ದಾರಿಯನ್ನು ಪ್ರಶಂಸಿಸಿದರು.

ಮಹ್ಶರ್ ಪಬ್ಲಿಕ್ ಕಾಲೇಜು ಗೇರುಕಟ್ಟೆ ಪ್ರಿನ್ಸಿಪಾಲ್ ಹೈದರ್ ಮರ್ದಾಲರವರು ಮಕ್ಕಳನ್ನು ಅವರಷ್ಟಕ್ಕೆ ಬಿಟ್ಟು ಬಿಡಿ, ಮಕ್ಕಳು ಹಕ್ಕಿಯಂತೆ ಹಾರಡಲಿ ಎಂದು ವಿದ್ಯಾರ್ಥಿಗಳನ್ನು ಹುರಿದುಂಬಿಸಿದರು. ಶಾಲಾ ಕ್ರೀಡಾಕೂಟದಲ್ಲಿ ಭಾಗವಹಿಸಿ ವಿಜೇತರಾದ ವಿದ್ಯಾರ್ಥಿಗಳಿಗೆ, ಹಳೆ ವಿದ್ಯಾರ್ಥಿಗಳಿಗೆ ಹಾಗೂ ಭಾರತ್ ಸ್ಕೌಟ್ಸ್ ಗೈಡ್ಸ್ ನಡೆಸಿದ ಖೋ ಖೋ ಕ್ರೀಡಾಕೂಟದಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ, ಶಾಲಾ ಕ್ರೀಡಾಕೂಟದಲ್ಲಿ ಭಾಗವಹಿಸಿ ವಿಜೇತರಾದ ಪೋಷಕರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ವೇದಿಕೆಯಲ್ಲಿ ಖಮರುಲ್ ಇಸ್ಲಾಮ್ ಮದ್ರಸನ ಮಾಜಿ ಅಧ್ಯಕ್ಷ ಅಬ್ದುಲ್ ಅಝೀಝ್, ಲಾರೆನ್ಸ್ ವೆಲ್ ರಿಂಗ್ ವರ್ಕ್ಸ್ ಮಾಲಕ ವಲೇರಿಯನ್ ಲಸ್ರಾದೋ, ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ಅಬ್ದುಲ್ ಅಝೀಝ್, ಶಾಲಾ ಮುಖ್ಯ ಶಿಕ್ಷಕಿ ಜಯಶ್ರೀ ಸಿ. ಸಾಲ್ಯಾನ್, ಶಾಲಾ ನಾಯಕ ಮೊಹಮ್ಮದ್ ಆಸಿಂ, ಉಪ ನಾಯಕಿ ನೌಶಿಯ ಉಪಸ್ಥಿತರಿದ್ದರು. ಶಿಕ್ಷಕಿ ವನಿತಾ ಶೆಟ್ಟಿ ಸ್ವಾಗತಿಸಿದರು. ಶಿಕ್ಷಕ -ರಕ್ಷಕ ಸಂಘದ ಉಪಾಧ್ಯಕ್ಷೆ ಸೂಪರ್ವೈಸರ್ ಮತ್ತು ಶಿಕ್ಷಕಿ ರಝೀಯ ಎಸ್. ಪಿ. ಮತ್ತು ಶಿಕ್ಷಕಿ ದಿವ್ಯ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ಪ್ರತಿಕ್ಷಾ ಹರೀಶ್ ವಂದಿಸಿದರು.

Exit mobile version