Site icon Suddi Belthangady

ದೇವಾಲಯಗಳಲ್ಲಿ ಧನುರ್ಮಾಸದ ಧನು ಪೂಜೆ ಸಮಾಪ್ತಿ 

ಉಜಿರೆ: ಧನು ಸಂಕ್ರಮಣದಿಂದ ಮೊದಲ್ಗೊಂಡು ಇಡೀ ತಿಂಗಳು ದೇವಸ್ಥಾನಗಳಲ್ಲಿ ಪ್ರಾತಃಕಾಲದಲ್ಲಿ ನಡೆದುಕೊಂಡು ಬರುತ್ತಿದ್ದ ಧನು ಪೂಜೆ ಮಕರ ಸಂಕ್ರಮಣ ಜ. 14 ರಂದು ಶುಭ ಮುಂಜಾನೆ  ಸಮಾಪನಗೊಂಡಿತು.

ಶ್ರೀ ಜನಾರ್ದನ ದೇವಸ್ಥಾನದಲ್ಲಿ ಅನುವಂಶಿಕ ಆಡಳಿತ ಮೊಕ್ತೇಸರ ಶರತ್ ಕೃಷ್ಣ ಪಡುವೆಟ್ನಾಯರ ನೇತೃತ್ವದಲ್ಲಿ  ಶ್ರೀ ಜನಾರ್ದನ ಸ್ವಾಮಿಗೆ  ಅರ್ಚಕ ವೇದಮೂರ್ತಿ ರಾಮಚಂದ್ರ ಹೊಳ್ಳರು ಹುಗ್ಗಿ ನೈವೇದ್ಯ ಸಮರ್ಪಿಸಿ ಧನು ಪೂಜೆ ನೆರೆವೇರಿಸಿದರು.

ಭಕ್ತಾದಿಗಳಿಂದ  ಭಜನೆ ನಡೆದು, ಪೂಜೆ ಬಳಿಕ ಪ್ರಸಾದ ವಿತರಿಸಲಾಯಿತು. ತಾಲೂಕಿನ ಶ್ರೀ ಕ್ಷೇತ್ರ ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿ, ಸುರ್ಯ ಶ್ರೀ ಸದಾಶಿವ  ರುದ್ರ ದೇವಸ್ಥಾನ, ನಾಳ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ಬರಯ ಶ್ರೀ ಗೋಪಾಲಕೃಷ್ಣ ದೇವಸ್ಥಾನ, ನಾವೂರು ಶ್ರೀ ಗೋ ಪಾಲಕೃಷ್ಣ ದೇವಸ್ಥಾನ, ಮತ್ತೂರು ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ಸೇರಿದಂತೆ ಇತರ ದೇವಸ್ಥಾನಗಳಲ್ಲಿ ಧನು ಪೂಜೆ ಸಮಾಪನಗೊಂಡಿತು.

Exit mobile version