ಅಳದಂಗಡಿ: ಶ್ರೀ ಸತ್ಯ ದೇವತಾ ಕಲ್ಲುರ್ಟಿ ದೈವಸ್ಥಾನದಲ್ಲಿ ಮಕರ ಸಂಕ್ರಾಂತಿ ಹಬ್ಬದ ಪ್ರಯುಕ್ತ ಹಾಗೂ ಸಂಕ್ರಮಣ ವಿಶೇಷ ಪೂಜೆಯು ಜ. 14 ರಂದು ಜರಗಿತು. ಸಾವಿರಾರು ಭಕ್ತಾದಿಗಳು ದೈವಸ್ಥಾನಕ್ಕೆ ಭೇಟಿ ನೀಡಿ ಹೂವಿನ ಪೂಜೆಯಲ್ಲಿ ಪಾಲ್ಗೊಂಡು ಗಂಧ ಪ್ರಸಾದ ಸ್ವೀಕರಿಸಿದರು. ಸುಲ್ಕೇರಿ ದಸರಾ ಕಾಂಪ್ಲೆಕ್ಸ್ ಮಾಲಕ ಸುಂದರ ಶೆಟ್ಟಿ ಪರಾರಿ ಭಕ್ತಾದಿಗಳಿಗೆ ಮಜ್ಜಿಗೆ ವಿತರಿಸಿದರು. ಶ್ರೀ ಸತ್ಯ ದೇವತಾ ಕಲ್ಲುರ್ಟಿ ದೈವ ಸ್ಥಾನದ ಆಡಳಿತದಾರ ಶಿವ ಪ್ರಸಾದ್ ಅಜಿಲ, ಗಣ್ಯರು, ಊರವರು ಭಾಗವಹಿಸಿದ್ದರು.