Site icon Suddi Belthangady

ತಣ್ಣೀರುಪಂತ: ಸಹಕಾರ ಭಾರತಿ ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ

ತಣ್ಣೀರುಪಂತ: ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನಿ. ಆಡಳಿತ ಮಂಡಳಿಯ ನಿರ್ದೇಶಕರ ಚುನಾವಣೆಗೆ ಬಿ. ಜೆ. ಪಿ ಬೆಂಬಲಿತ ಸಹಕಾರ ಭಾರತಿಯಿಂದ ಅಭ್ಯರ್ಥಿಗಳಾಗಿ ಸಾಮಾನ್ಯ ಕ್ಷೇತ್ರದಿಂದ ಜಗದೀಶ್ ಶೆಟ್ಟಿ ಮೈರ, ಜಯಾನಂದ ಕಲ್ಲಾಪು, ಸಾಮ್ರಾಟ್ ಕಲ್ಲೇರಿ, ಪ್ರಭಾಕರ ಗೌಡ ಪೋಸಂದೋಡಿ, ಸುನಿಲ್ ಗೌಡ ಅಣವು, ರೋಹಿತ್ ಕುಪ್ಪೆಟ್ಟಿ, ಹಿಂದುಳಿದ ವರ್ಗ ಎ ಕ್ಷೇತ್ರ ದಿಂದ ರಜನಿನಾಥ್ ಮುಂದಿಲ, ಹಿಂದುಳಿದ ಬಿ ಕ್ಷೇತ್ರದಿಂದ ಕೃಷ್ಣಪ್ಪ ಗೌಡ, ಸಾಮಾನ್ಯ ಮಹಿಳಾ ಕ್ಷೇತ್ರದಿಂದ ಜಯಂತಿ ಪಾಲೇದು, ಸರೋಜಿನಿ ವಿಜಯ ಗೌಡ ಪರಿಶಿಷ್ಟ ಜಾತಿ ಕ್ಷೇತ್ರದಿಂದ ಶ್ರೀನಿವಾಸ್ ಅಳಕ್ಕೆ ಪರಿಶಿಷ್ಟ ಪಂಗಡದಿಂದ ಸುರೇಶ್ ಹೆಚ್. ಎಲ್. ಇವರುಗಳು ಬಿ. ವಿ. ಪ್ರತಿಮಾ ರಿಟರ್ನಿಂಗ್ ಅಧಿಕಾರಿಯವರಿಗೆ ಜ. 14 ರಂದು ಸಂಘದ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದರು.

ಚುನಾವಣಾ ಪ್ರಭಾರಿಗಳಾದ ಪ್ರವೀಣ್ ರೈ ಬಾರ್ಯ, ನಂದನ್ ಕುಮಾರ್, ಕಣಿಯೂರು ಮಹಾಶಕ್ತಿ ಕೇಂದ್ರ ಪ್ರಧಾನ ಕಾರ್ಯದರ್ಶಿ ಮಹೇಶ್ ಜೇoಕ್ಯಾರ್, ಮಿಥುನ್ ಕುಲಾಲ್, ಜಯರಾಮ್ ಆಚಾರ್ಯ, ಹಿರಿಯರಾದ ಪೂವಪ್ಪ ಬಂಗೇರ ಆಳಕ್ಕೆ, ದೇಜಪ್ಪ ಪೂಜಾರಿ ಆಳಕ್ಕೆ, ಶಕ್ತಿ ಕೇಂದ್ರ ಪ್ರಮುಖರು, ಜನಪ್ರತಿನಿಧಿಗಳು, ಬೂತ್ ಸಮಿತಿ ಪದಾಧಿಕಾರಿಗಳು, ಪಕ್ಷದ ಪ್ರಮುಖರು, ಕಾರ್ಯಕರ್ತರು ಉಪಸ್ಥಿತರಿದ್ದರು.

Exit mobile version