Site icon Suddi Belthangady

ಉಜಿರೆ: ರಾಷ್ಟ್ರಮಟ್ಟದ ಇಂಡಿಯನ್ ಸೈನ್ಸ್ ಅಂಡ್ ಇಂಜಿನಿಯರಿಂಗ್ ಫೇರ್

ಉಜಿರೆ: ಜ. 10 ರಿಂದ 13 ರವರೆಗೆ ಬೆಂಗಳೂರಿನ ವಾಗ್ದೇವಿ ವಿಲಾಸ್ ಶಾಲೆಯಲ್ಲಿ ನಡೆದ ರಾಷ್ಟ್ರಮಟ್ಟದ ಇಂಡಿಯನ್ ಸೈನ್ಸ್ ಅಂಡ್ ಇಂಜಿನಿಯರಿಂಗ್ ಫೇರ್ ನಲ್ಲಿ ಎಸ್. ಡಿ. ಎಮ್ ಆಂಗ್ಲ ಮಾಧ್ಯಮ ಶಾಲೆ (ರಾಜ್ಯ ಪಠ್ಯಕ್ರಮ)ಯ 10ನೇ ತರಗತಿಯ ವಿದ್ಯಾರ್ಥಿಗಳಾದ ಅಧಿಶ್ ಬಿ. ಸಿ. ಮತ್ತು ಆಲಾಪ್ ಎಂ. ಭಾಗವಹಿಸಿ, ವಿಜ್ಞಾನದ ಸಂಶೋಧನೆಯನ್ನು ಮಂಡಿಸಿ ಗೌರವಾನ್ವಿತ ಪುರಸ್ಕೃತವನ್ನು ಪಡೆದುಕೊಂಡಿರುತ್ತಾರೆ.

ಇವರಿಗೆ ಶಾಲಾ ವಿಜ್ಞಾನ ಶಿಕ್ಷಕಿ ಧನ್ಯವತಿ. ಕೆ ಮಾರ್ಗದರ್ಶನ ನೀಡಿರುತ್ತಾರೆ. ಶಾಲಾ ಆಡಳಿತ ಮಂಡಳಿ, ಶಾಲಾ ಮುಖ್ಯೋಪಾಧ್ಯಾಯನಿ ಹಾಗೂ ಶಿಕ್ಷಕ ವೃಂದದವರು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿರುತ್ತಾರೆ .

Exit mobile version