Site icon Suddi Belthangady

ಉಜಿರೆ: ಉತ್ಥಾನ ಪತ್ರಿಕೆಯ ಗಣರಾಜ್ಯೋತ್ಸವ ವಿಶೇಷ ಸಂಚಿಕೆ ಬಿಡುಗಡೆ

ಉಜಿರೆ: ರಾಷ್ಟೋತ್ಥಾನ ಪರಿಷತ್ತಿನ ಮಾಸಪತ್ರಿಕೆ ಉತ್ಥಾನ, ರಾಷ್ಟ್ರೀಯ ಸ್ವಯಂಸೇವಕ ಸಂಘದ 100ನೇ ವರ್ಷದ ಪ್ರಯುಕ್ತ ಉತ್ಥಾನ ಪತ್ರಿಕೆಯ ಗಣರಾಜ್ಯೋತ್ಸವ ವಿಶೇಷ ಸಂಚಿಕೆ ಜ. 12 ರಂದು ಶ್ರೀ ಜನಾರ್ದನ ದೇವಸ್ಥಾನದ ವಠಾರದಲ್ಲಿ ದೇವಸ್ಥಾನದ ಆನುವಂಶಿಕ ಆಡಳಿತ ಮೋಕ್ತೆಸರ ಶರತ್ ಕೃಷ್ಣ ಪಡ್ಡೆಟ್ನಾಯ ಬಿಡುಗಡೆ ಗೊಳಿಸಿದರು.

ಈ ಸಂದರ್ಭದಲ್ಲಿ ಉಜಿರೆಯ ಪದ್ಮನಾಭ ಶೆಟ್ಟಿಗಾರ್, ಪುತ್ತೂರು ಜಿಲ್ಲಾ ಸಂಘಚಾಲಕ ವಿನಯಚಂದ್ರ, ರಾಮದಾಸ್ ಭಂಡಾ‌ರ್ ಕಾರ್, ಪ್ರಶಾಂತ ಶೆಟ್ಟಿಗಾರ್, ಪುತ್ತೂರು ಜಿಲ್ಲಾ ಸಂಘ ಪ್ರಮುಖರು ಹಾಗೂ ಮೊದಲಾದವರು ಉಪಸ್ಥಿತರಿದ್ದರು. ಈ ಪುಸ್ತಕದಲ್ಲಿ 27 ಲೇಖಕರಿಂದ ಪ್ರಕಟವಾದ ಲೇಖನಗಳನ್ನು ಒಳಗೊಂಡಿದೆ.

Exit mobile version