ವೇಣೂರು: ಪಡ್ಡಂದಡ್ಕ ನೂರುಲ್ ಹುಧಾ ಕೇಂದ್ರ ಮಸೀದಿ ಖತೀಬ್ ಜನಾಬ್ ಅಶ್ರಫ್ ಫೈಝಿ ಅರ್ಕಾನರವರಿಗೆ ಪವಿತ್ರ ಉಮ್ರಾ ಯಾತ್ರೆಗೆ ಬೀಳ್ಕೊಡುಗೆ. ಮಸೀದಿ ಆಡಳಿತ ಸಮಿತಿ ಅಧ್ಯಕ್ಷ ಇಸ್ಮಾಯಿಲ್ ಕೆ. ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿ ಪತ್ರಕರ್ತ ಎಚ್. ಮಹಮ್ಮದ್ ವೇಣೂರು ಶುಭ ಹಾರೈಸಿದರು.
ಪ್ರಮುಖರಾದ ಚಿಕ್ಕಮಗಳೂರಿನ ಸಲೀಮ್ ಗರ್ಡಾಡಿ, ಅಬ್ದುಲ್ ರಹಿಮಾನ್ ಕಟ್ಟೆ, ರಫೀಕ್ ಪಡ್ಡ, ಮಹಮೂದ್ ಪಿ. ಜೆ., ಖಾಲಿದ್ ಪುಲಬೆ, ಅಬ್ದು ಸಲಾಂ ಕೇಶವನಗರ, ನಜೀರ್ ಪೆರಿಂಜೆ, ಪೆರಿಂಜೆ ಮದರಸದ ಅಧ್ಯಾಪಕ ಮೊಹಮ್ಮದ್ ಅಲ್ತಾಫ್, ಕೆ. ಪಿ. ಬಶೀರ್, ಶಬ್ಬೀರ್ ಕಟ್ಟೆ, ಶಬ್ಬೀರ್ ಪಡ್ಡ, ಸದರ್ ಮೊಹಲ್ಲಿಂ, ಸಿಬಂದಿ ವರ್ಗ ಜಮಾತಿನ ಸದಸ್ಯರು ಉಪಸ್ಥಿತರಿದ್ದರು. ಮಸೀದಿ ಸಮಿತಿ ಮತ್ತು ಜಮಾತಿನ ಸದಸ್ಯರು ಶಾಲು ಹೊದಿಸಿ ಶುಭ ಹಾರೈಸಿದರು. ಇಸ್ಮಾಯಿಲ್ ಎಚ್. ಗಾಂಧಿನಗರ ಸ್ವಾಗತಿಸಿ, ವಂದಿಸಿದರು.