ಅಟ್ಲಾಜೆ: ಸರ್ವೋದಯ ಫ್ರೆಂಡ್ಸ್ ಹಾಗೂ ಸ. ಕಿ. ಪ್ರಾಥಮಿಕ ಶಾಲಾ ವತಿಯಿಂದ 76ನೇ ಗಣರಾಜ್ಯೋತ್ಸವ ಆಚರಣೆ ಹಾಗೂ ವಾರ್ಷಿಕ ಕ್ರೀಡಾಕೂಟದ ಆಮಂತ್ರಣ ಪತ್ರಿಕೆ ಬಿಡುಗಡೆಯನ್ನು ದಿನೇಶ್ ಬಿ. ಕೆ. ಸಂತ ಅಂತೋನಿ ಕಾಲೇಜ್ ನಾರಾವಿ ಕನ್ನಡ ಉಪನ್ಯಾಸಕರು ಬಿಡುಗಡೆಗೊಳಿಸಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಸರ್ವೋದಯ ಫ್ರೆಂಡ್ಸ್ ನ ಗೌರವ ಸಲಹೆಗಾರರು ಸತೀಶ್ ರೈ ಬಾರ್ದಡ್ಕ ಅತಿಥಿ ನೆಲೆಯಲ್ಲಿ ಮಾತನಾಡಿದರು. ಶಾಲಾ ಮುಖ್ಯೋಪಾಧ್ಯಾಯ ಪ್ರಮೋದ್, ಅಶ್ರಫ್ ಕಾವಾಡಿ, ಚಿತ್ರನ್ ಕೊಂಗುಳ, ಶಾಲಾ ಸಮಿತಿ ಅಧ್ಯಕ್ಷರು ಸಂತೋಷ್ ಕೊಂಗಲ ಹಾಗೆಯೇ ಸರ್ವೋದಯ ಫ್ರೆಂಡ್ಸ್ ಅಧ್ಯಕ್ಷರು ಸುರೇಶ್ ಪೂಜಾರಿ ಹೆವಾ ಮಾತನಾಡಿ ಎಲ್ಲರಿಗೂ ಶುಭ ಹಾರೈಸಿದರು.
ಕ್ರಿಕೆಟ್ ಪಂದ್ಯಾಟವನ್ನು ನಡೆಸಲಾಯಿತು. ಕಾರ್ಯಕ್ರಮದ ನಿರೂಪಣೆಯನ್ನು ಹರೀಶ್ ವೈ ಚಂದ್ರಮ ಬ್ರಹ್ಮಶ್ರೀ ಕುಣಿತ ಭಜನಾ ಮಂಡಳಿ ನಡೆಸಿಕೊಟ್ಟರು. ಜ. 26 ನ ಗಣರಾಜ್ಯೋತ್ಸವ ಕ್ರೀಡಾಕೂಟಕ್ಕೆ ಎಲ್ಲರನ್ನು ಆಮಂತ್ರಣಿಸಲಾಯಿತು.