Site icon Suddi Belthangady

ಬೆಳ್ತಂಗಡಿ ತಾಲೂಕು ಯುವಜನ ಒಕ್ಕೂಟದ ಮಹಾಸಭೆ – ಅಧ್ಯಕ್ಷರಾಗಿ ವಿಜಯ ಗೌಡ ವೇಣೂರು – ಪ್ರ. ಕಾರ್ಯದರ್ಶಿ ಚಿದಾನಂದ ಇಡ್ಯಾ ಆಯ್ಕೆ

ಬೆಳ್ತಂಗಡಿ: ತಾಲೂಕು ಯುವಜನ ಒಕ್ಕೂಟದ ಮಹಾಸಭೆ ಜ. 12 ರಂದು ತಾಲೂಕು ಪಂಚಾಯತ್ ಸಭಾಂಗಣದಲ್ಲಿ, ಒಕ್ಕೂಟದ ಅಧ್ಯಕ್ಷ ರಮಾನಂದ ಸಾಲಿಯನ್ ಮುಂಡೂರು ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ 2025 -26 ನೇ ಸಾಲಿನ ನೂತನ ಅಧ್ಯಕ್ಷರು ಪದಾಧಿಕಾರಿಗಳ ಆಯ್ಕೆ ನಡೆಯಿತು.

ಅಧ್ಯಕ್ಷರಾಗಿ ವಿಜಯ ಗೌಡ ವೇಣೂರು, ಪ್ರಧಾನ ಕಾರ್ಯದರ್ಶಿಯಾಗಿ ಚಿದಾನಂದ ಇಡ್ಯಾ, ಕೋಶಾಧಿಕಾರಿಯಾಗಿ ಪ್ರಶಾಂತ್ ಮಚ್ಚಿನ, ಉಪಾಧ್ಯಕ್ಷರಾಗಿ ಸದಾಶಿವಾ ಹೆಗ್ಡೆ, ಸೌಮ್ಯ ಲಾಯಿಲ, ಜತೆ ಕಾರ್ಯದರ್ಶಿಯಾಗಿ ಸುಧಾಮಣಿ ಆರ್., ಕ್ರೀಡಾ ಸಂಚಾಲಕರಾಗಿ ಹರೀಶ್ ಶಿಶಿಲ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಶೇಖರ್ ಲಾಯಿಲ, ಸಂಘಟನಾ ಕಾರ್ಯದರ್ಶಿಗಳಾಗಿ ಮಹಮದ್ ಸಿದ್ದಿಕ್ ಮಲೆಬೆಟ್ಟು, ರಾಮಚಂದ್ರ ಶಿಶಿಲ, ಹರಿಣಾಕ್ಷಿ ಬಧನಾಜೆ, ಯೋಗೀಶ್ ವೇಣೂರು ಆಯ್ಕೆಯಾದರು.

ಆಯ್ಕೆ ಪ್ರಕ್ರಿಯೆಯನ್ನು ದಕ್ಷಿಣ ಕನ್ನಡ ಜಿಲ್ಲಾ ಯುವಜನ ಒಕ್ಕೂಟದ ಗೌರವ ಅಧ್ಯಕ್ಷ ರಾಜೀವ್ ಸಾಲಿಯಾನ್ ಮುಂಡೂರು ನಡೆಸಿಕೊಟ್ಟರು. ಯುವಜನ ಒಕ್ಕೂಟದ ಮಾಜಿ ಅಧ್ಯಕ್ಷ ಲೋಕೇಶ್ ಶೆಟ್ಟಿ ಧರ್ಮಸ್ಥಳ, ವಿಠಲ್ ಸಿ. ಪೂಜಾರಿ ಹೊಸಂಗಡಿ, ಸಿ. ಕೆ. ಚಂದ್ರಕಲಾ ಹಾಗೂ ತಾಲೂಕಿನ ಯುವಕ ಮಂಡಲಗಳ ಅಧ್ಯಕ್ಷರು ಪದಾಧಿಕಾರಿಗಳು ಉಪಸ್ಥಿತರಿದ್ದರು.

Exit mobile version