ವೇಣೂರು: ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಂದಿನ 5 ವರ್ಷಗಳ ಅವಧಿಗೆ ಆಡಳಿತ ಮಂಡಳಿ ನಿರ್ದೇಶಕರ ಆಯ್ಕೆಗೆ ಜ. 12 ರಂದು ನಡೆದ ಚುನಾವಣೆಯಲ್ಲಿ ಸಹಕಾರ ಭಾರತಿಯ ಹಾಲಿ ಅಧ್ಯಕ್ಷ ಸುಂದರ ಹೆಗ್ಡೆ ತಂಡದ ಎಲ್ಲಾ 12 ಸ್ಥಾನ ಗೆದ್ದು ಜಯಭೇರಿ ಗಳಿಸಿದೆ.
ಸಾಮಾನ್ಯ 6 ಸ್ಥಾನದಿಂದ ಹಾಲಿ ಅಧ್ಯಕ್ಷ ಸುಂದರ ಹೆಗ್ಡೆ, ಕೃಷ್ಣಪ್ಪ ಮೂಲ್ಯ, ಪ್ರವೀಣ ಪೂಜಾರಿ, ರತ್ನಾಕರ ಬಿ., ರಾಮದಾಸ ನಾಯಕ್ ಎಂ., ಸಂದೀಪ್ ಹೆಗ್ಡೆ 2 ಮಹಿಳಾ ಮೀಸಲು ಕ್ಷೇತ್ರದಿಂದ ಆಶಾ ಸುಂದರ್, ರೋಹಿಣಿ ಪ್ರಕಾಶ್, ಪರಿಶಿಷ್ಟ ಜಾತಿ ಸ್ಥಾನದಿಂದ ನಾಗಪ್ಪ, ಪರಿಶಿಷ್ಟ ಪಂಗಡ ಮೀಸಲು ಕ್ಷೇತ್ರದಿಂದ ರಾಜು ನಾಯ್ಕ, ಹಿಂದುಳಿದ ಎ ಸ್ಥಾನದಿಂದ ಪ್ರಶಾಂತ್ ಪೂಜಾರಿ, ಹಿಂದುಳಿದ ವರ್ಗ ಬಿ ಮೀಸಲು ಕ್ಷೇತ್ರದಿಂದ ಎಂ. ಆರ್. ಸಂತೋಷ್ ಆಯ್ಕೆಯಾಗಿದ್ದಾರೆ.