ಧರ್ಮಸ್ಥಳ: ದಕ್ಷಿಣ ಕನ್ನಡ ಜಿಲ್ಲಾ ಸಂಸ್ಥೆ ಮೂಡಬಿದ್ರೆ ಸ್ಥಳೀಯ ಸಂಸ್ಥೆ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಮೂಡಬಿದ್ರೆ ಸಹಭಾಗಿತ್ವದಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ವಿದ್ಯಾಗಿರಿಯಲ್ಲಿ ನಡೆದ ಜಿಲ್ಲಾಮಟ್ಟದ ಪ್ರತಿಭಾ ಕಲೋತ್ಸವ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಎಸ್. ಡಿ. ಎಮ್. ಆಂಗ್ಲ ಮಾಧ್ಯಮ ಶಾಲೆಯ ಕಬ್ ಬುಲ್ ಬುಲ್, ಸ್ಕೌಟ್ ಗೈಡ್, ವಿದ್ಯಾರ್ಥಿಗಳು ಭಾಗವಹಿಸಿ, ಶ್ರೇಯಸಿ ಹೆಚ್. ಎಸ್. 3ನೇ ಅಭಿನಯ ಗೀತೆಯಲ್ಲಿ ದ್ವಿತೀಯ, ವಾಸ್ಟಿಕ್ 4ನೇ ಅಭಿನಯ ಗೀತೆಯಲ್ಲಿ ದ್ವಿತೀಯ, ಶ್ರವಣ್ ಬಿ. ಜೆ. 7ನೇ ಮಿಮಿಕ್ರಿಯಲ್ಲಿ ದ್ವಿತೀಯ, ಮನ್ವಿತ್ ಪಿ. 5ನೇ ಭರತನಾಟ್ಯದಲ್ಲಿ ತೃತೀಯ, ಪೂರ್ವಿ ಭಟ್ 9ನೇ ಆಶುಭಾಷಣದಲ್ಲಿ ತೃತೀಯ, ಸ್ಪಂದನ 5ನೇ ಪ್ಲೇ ಮಾಡಲಿಂಗ್ ನಲ್ಲಿ ತೃತೀಯ, ಕ್ಷಮಾ ಡಿ. ಎಚ್. 9ನೇ ಪ್ರಬಂಧ ರಚನೆಯಲ್ಲಿ ತೃತೀಯ, ಯಶ್ವಿತ್ ಆಶುಭಾಷಣದಲ್ಲಿ ತೃತೀಯ ಬಹುಮಾನಗಳನ್ನು ಪಡೆದಿರುತ್ತಾರೆ .