Site icon Suddi Belthangady

ಬಳಂಜ: ಪ್ರಾಥಮಿಕ ಹಾಗೂ ಪ್ರೌಢ ಶಾಲೆಯಲ್ಲಿ ಮೆಟ್ರಿಕ್ ಮೇಳ

ಬಳಂಜ: ಸರಕಾರಿ ಉನ್ನತೀಕರಿಸಿದ ಪ್ರಾಥಮಿಕ ಮತ್ತು ಪ್ರೌಢ ಶಾಲೆ ಬಳಂಜದಲ್ಲಿ ಜ. 11 ರಂದು 2024-25 ನೇ ಶೈಕ್ಷಣಿಕ ಸಾಲಿನ ಮಕ್ಕಳ ಮೆಟ್ರಿಕ್ ಮೇಳ ಕಾರ್ಯಕ್ರಮವು ನಡೆಯಿತು.

ಶಾಲಾ ಮಕ್ಕಳು ಬೀದಿ ವ್ಯಾಪಾರ, ದಿನಸಿ ಅಂಗಡಿ ಮತ್ತು ಶಾಪಿಂಗ್ ಮಾಲ್ ಎಂಬ ಮೂರು ವಿಧದ ವ್ಯಾಪಾರಗಳನ್ನು ನಡೆಸಿದರು. ಈ ಕಾರ್ಯಕ್ರಮದ ಉದ್ಘಾಟನೆಯನ್ನು ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ರತ್ನಾಕರ್ ಪೂಜಾರಿ ನೆರವೇರಿಸಿ, ವಿದ್ಯಾರ್ಥಿನಿ ಅನುಶ್ರೀ ಸ್ವಾಗತಿಸಿದರು. ಕಾರ್ಯಕ್ರಮಕ್ಕೆ ಬೆಳ್ತಂಗಡಿ ಶಿಕ್ಷಣಾಧಿಕಾರಿ ತಾರಕೇಸರಿ, ಸುಜಯ ದೈಹಿಕ ಶಿಕ್ಷಣ ಪದಾಧಿಕಾರಿಗಳು, ಚೇತನಾಕ್ಷಿ ಬೆಳ್ತಂಗಡಿ ಶಿಕ್ಷಣ ಸಂಯೋಜಕರು ಹಾಗೂ ಕಿರಣ್ ಕುಮಾರ್ ಕೆ. ಎಸ್. ಪೆರೋಡಿತ್ತಯಕಟ್ಟೆ ಕ್ಲಸ್ಟರ್ ಸಿ. ಆರ್. ಪಿ ಆಗಮಿಸಿ ಮಕ್ಕಳಿಗೆ ಶುಭ ಹಾರೈಸಿದರು . ಶಾಲೆಯ ಎಲ್ಲಾ ಶಿಕ್ಷಕರು ಕಾರ್ಯಕ್ರಮದಲ್ಲಿ ಸಹಕರಿಸಿದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ ಶಾಲೆಯ ಹಳೆ ವಿದ್ಯಾರ್ಥಿಗಳಿಗೆ, ಶಾಲಾಭಿವೃದ್ಧಿ ಸಮಿತಿಯ ಸದಸ್ಯರಿಗೆ, ಪೋಷಕರಿಗೆ, ಊರಿನ ವಿದ್ಯಾಭಿಮಾನಿಗಳಿಗೆ ಶಾಲಾ ಮುಖ್ಯೋಪಾಧ್ಯಾಯರು ರಂಗಸ್ವಾಮಿ ಸಿ. ಆರ್. ಧನ್ಯವಾದಗಳನ್ನು ಸಲ್ಲಿಸಿದರು.

Exit mobile version