ನಾರಾವಿ: ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮುಂದಿನ 5 ವರ್ಷಗಳ ಆಡಳಿತ ಮಂಡಳಿಗೆ ಜ. 11 ರಂದು ಚುನಾವಣೆ ನಡೆದಿದ್ದು, ಅಂತಿಮ ಕಣದಲ್ಲಿ 22 ಜನ ಸ್ಪರ್ದಿಸಿದ್ದರು.
ಪರಿಶಿಷ್ಠ ಪಂಗಡದಿಂದ ಸಹಕಾರಿ ಭಾರತೀಯ ಉಮೇಶ್ ಅವಿರೋಧವಾಗಿ ಮೊದಲೇ ಆಯ್ಕೆಯಾಗಿದ್ದರು. ಸಹಕಾರಿ ಭಾರತೀಯ ನಾರಾವಿ ಗ್ರಾಮ ಸಾಮಾನ್ಯ ಕ್ಷೇತ್ರದಿಂದ ಸುಧಾಕರ ಭಂಡಾರಿ, ರಾಜೇಂದ್ರ ಕುಮಾರ್, ಮಹಿಳಾ ಕ್ಷೇತ್ರದಿಂದ ಸುಜಲತಾ, ಕೊಕ್ರಾಡಿ ಗ್ರಾಮ ಸಾಮಾನ್ಯ ಕ್ಷೇತ್ರದಿಂದ ಜಗದೀಶ್ ಹೆಗ್ಡೆ, ಪದ್ಮಶ್ರೀ ಜೈನ್, ಸುಲ್ಕೇರಿ ಗ್ರಾಮ ಹಿಂದುಳಿದ ವರ್ಗ ಬಿ. ಕ್ಷೇತ್ರ ದಿಂದ ಸದಾನಂದ ಗೌಡ, ಸಾಲೇತರ ಕ್ಷೇತ್ರದಿಂದ ಸುಪ್ರಿಯಾ ಪ್ರಕಾಶ್, ಕಾಂಗ್ರೆಸ್ ಬೆಂಬಲಿತ ಕುತ್ಲೂರು ಗ್ರಾಮ ಸಾಮಾನ್ಯ ಕ್ಷೇತ್ರದಿಂದ ಕೃಷ್ಣಪ್ಪ, ಪರಿಶಿಷ್ಟ ಜಾತಿ ಕ್ಷೇತ್ರದಿಂದ ಕೊರಗಪ್ಪ ಯಾನೆ ಶೇಖರ, ಮಹಿಳಾ ಮೀಸಲು ಕ್ಷೇತ್ರದಿಂದ ಯಶೋದ, ಸಾವ್ಯ ಗ್ರಾಮ ಹಿಂದುಳಿದ ವರ್ಗ ಎ. ಕ್ಷೇತ್ರ ದಿಂದ ವಿಠಲ ಪೂಜಾರಿ ಚುನಾಹಿತರಾಗಿದ್ದಾರೆ.
7 ಜನ ಸಹಕಾರಿ ಭಾರತೀಯಿಂದ ಚುನಾವಣೆಯಲ್ಲಿ ಜಯಗಳಿಸಿದ್ದರೆ. ಒಬ್ಬರು ಅವಿರೋಧವಾಗಿ ಆಯ್ಕೆಯಾಗಿದ್ದರು. ಕಾಂಗ್ರೆಸ್ ಬೆಂಬಲಿತ 4 ಜನ ಚುನಾವಣೆಯಲ್ಲಿ ಜಯ ಗಳಿಸಿದ್ದಾರೆ. ಎರಡೂ ಪಕ್ಷದವರು ಕೋರ್ಟ್ ಮೊರೆ ಹೋದದ್ದರಿಂದ ಚುನಾವಣೆ ನಡೆದರೂ ಫಲಿತಾಂಶ ಮಾತ್ರ ಕೋರ್ಟ್ ತಡೆ ಹಿಡಿದಿದೆ.