ಮಚ್ಚಿನ: ಮಾಣೂರು ಸಪರಿವಾರ ಶ್ರೀ ಶಾಸ್ತಾರ ದೇವಸ್ಥಾನದ ನೂತನ ದೇವಾಲಯದ ಶಿಲಾನ್ಯಾಸ ಜ.11 ರಂದು ನಡೆಯಿತು. ವೇದಮೂರ್ತಿ ಬ್ರಹ್ಮಶ್ರೀ ವಳಕುಂಜ ವೆಂಕಟರಮಣ ಜೋಯಿಸರ ಮಾರ್ಗದರ್ಶನದಲ್ಲಿ ವೇದಮೂರ್ತಿ ವಾಸ್ತುಶಿಲ್ಪ ಬ್ರಹ್ಮಶ್ರೀ ಗಿರೀಶ ಶರ್ಮರ ನಿರ್ದೇಶಾನುಸಾರ ಬ್ರಹ್ಮಶ್ರೀ ಪರಕ್ಕಜೆ ಆನಂತನಾರಾಯಣ ಭಟ್ಟರ ಆಚಾರ್ಯತ್ವದಲ್ಲಿ ಶಿಲಾನ್ಯಾಸ ನಡೆಯಿತು. ಸಭಾ ಕಾರ್ಯಕ್ರಮ ನಡೆಯಿತು.
ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಳ್ಳಮಂಜ ಶ್ರೀ ಅನಂತೇಶ್ವರ ಸ್ವಾಮಿ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರು ಎಂ. ಹರ್ಷ ಸಂಪಿಗೆತ್ತಾಯ ವಹಿಸಿದ್ದರು. ಆರಿಕೋಡಿ ಶ್ರೀ ಚಾಮುಂಡೇಶ್ವರಿ ಕ್ಷೇತ್ರದ ಧರ್ಮದರ್ಶಿ ಹರೀಶ್ ಆರಿಕೋಡಿ ದೀಪ ಪ್ರಜ್ವಲನೆ ಮಾಡಿದರು. ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಶುಭಶಂಸನೆ ನೀಡಿದರು. ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಸದಸ್ಯ ಕೆ. ಪ್ರತಾಪ್ ಸಿಂಹ ನಾಯಕ್, ಉದ್ಯಮಿ ಕಿರಣ್ ಚಂದ್ರ ಪುಷ್ಪಗಿರಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಗುರುವಾಯನಕೆರೆ ವಿಭಾಗದ ಯೋಜನಾಧಿಕಾರಿ ದಯಾನಂದ, ಕಿರಾತಮೂರ್ತಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಅಧ್ಯಕ್ಷ ಗೋಪಾಲ ಶೆಟ್ಟಿ ಕೋರ‍್ಯಾರು, ಓಡೀಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಅಧ್ಯಕ್ಷ ಪ್ರಭಾಕರ ಶೆಟ್ಟಿ ಉಪ್ಪಡ್ಕ, ಪಾರೆಂಕಿ ಶ್ರೀ ಮಹಿಷಮರ್ದಿನಿ ದೇವಸ್ಥಾನದ ಅಧ್ಯಕ್ಷ ವಿಠಲ ಶೆಟ್ಟಿ ಮೂಡಾಯೂರು, ಮಾಣೂರು ಸಪರಿವಾರ ದೇವಸ್ಥಾನದ ಆಡಳಿತಾಧಿಕಾರಿ ಗೌರಿಶಂಕರ ಎಚ್. ಎಸ್., ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಹೊನ್ನಪ್ಪ ಕುಲಾಲ್, ಅರ್ಚಕ ರಾಮಚಂದ್ರ ಭಟ್, ಎಂ. ಕೃಷ್ಣ ಭಟ್, ಮಚ್ಚಿನ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಸೋಮವತಿ, ಜಿರ್ಣೋದ್ಧಾರ ಸಮಿತಿಯ ಉಪಾಧ್ಯಕ್ಷ ಪ್ರಮೋದ್ ಕುಮಾರ್ ಬಳ್ಳಮಂಜ, ಯಶೋಧರ ಶೆಟ್ಟಿ ಅರ್ಕಜೆ, ಪ್ರಭಾಕರ ಪೂಜಾರಿ ಮುದಲಡ್ಕ, ಪ್ರಭಾಕರ ಪ್ರಭು, ಚಿತ್ತರಂಜನ್ ಕುರುಡಂಗೆ, ಡೀಕಯ್ಯ ಮೂಲ್ಯ ಹರ್ಮಾಡಿ, ಅವಿನಾಶ್ ಕುಲಾಲ್ ಮಾಣೂರು, ಕಾರ್ಯದರ್ಶಿ ಬಾಲಕೃಷ್ಣ ಪೂಜಾರಿ ಮಾಣೂರು, ಜೊತೆ ಕಾರ್ಯದರ್ಶಿ ನವೀನ್ ಮೂಲ್ಯ, ಕೋಶಾಧಿಕಾರಿ ಪ್ರಸಾದ್ ಎಮ್. ಕೆ ಮಾಣೂರು, ನಿಶಾಪ್ರಸಾದ್ ಮಾಣೂರು, ಗೌರವ ಸಲಹೆಗಾರ ಗೋಪಾಲ ಪೂಜಾರಿ ಕೋಲಾಜೆ, ಸದಸ್ಯರಾದ ಶಿವಪ್ಪ ಪೂಜಾರಿ ಮಾಣೂರು, ಸುಬ್ರಹ್ಮಣ್ಯ ಭಟ್ ಹರ್ಮಾಡಿ, ಮಂಜುನಾಥ ಮಾಣೂರು, ಹರೀಶ್ ಪ್ರಭು ಮುದಲಡ್ಕ, ಯತೀಶ್ ರೈ ಕೈಲ, ಶಾಂತ ಕುಲಾಲ್ ಹರ್ಮಾಡಿ, ಶಶಿಕಲಾ ಮಾಣೂರು ಎಚ್.ಎಸ್.ಉಪಸ್ಥಿತರಿದ್ದರು.
ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಚಂದ್ರಕಾಂತ ನಿಡ್ಡಾಜೆ ಸ್ವಾಗತಿಸಿ, ವಕೀಲ ವಸಂತ ಮರಕಡ ಕಾರ್ಯಕ್ರಮ ನಿರೂಪಿಸಿ, ವಕೀಲ ಜಗದೀಶ್ ಧನ್ಯವಾದವಿತ್ತರು.