Site icon Suddi Belthangady

ಪಟ್ಟಣ ಪಂಚಾಯತ್‌ನವರು ಚರಂಡಿ ತೆಗೆದ ವಿವಾದ ಮುಂದುವರಿಕೆ

ಬೆಳ್ತಂಗಡಿ: ಕೋರ್ಟ್ ರಸ್ತೆಯಲ್ಲಿರುವ ವಿಘ್ನೇಶ್ ಸಿಟಿ ಕಟ್ಟಡದ ಮುಂಭಾಗದ ಚರಂಡಿಯನ್ನು ಪಟ್ಟಣ ಪಂಚಾಯತ್‌ನವರು ರಿಪೇರಿಗೆ ತೆರೆದಿದ್ದರೂ ಅದನ್ನು ಇನ್ನೂ ಮುಚ್ಚಿಲ್ಲ ಎಂಬ ವಿಚಾರದ ವಿವಾದ ಮುಂದುವರಿದಿದೆ. ಪಟ್ಟಣ ಪಂಚಾಯತ್‌ನವರು ನಾವು ಚರಂಡಿ ಮುಚ್ಚುವುದಿಲ್ಲ. ಅದನ್ನು ಕಟ್ಟಡದ ಮಾಲಿಕರೇ ಮಾಡಬೇಕು ಎಂದು ತಿಳಿಸಿದ್ದರು. ಇದಕ್ಕೆ ಆಡಳಿತ ಮಂಡಳಿಯೂ ಸಮ್ಮತಿ ಸೂಚಿಸಿತ್ತು. ಆದರೆ ಕಟ್ಟಡ ಮಾಲಕರೂ ಚರಂಡಿ ಮುಚ್ಚಲು ಮುಂದಾಗಿಲ್ಲ. ಆದ್ದರಿಂದ ವಿಘ್ನೇಶ್ ಸಿಟಿಯ ಮುಂಭಾಗದ ಚರಂಡಿ ಇನ್ನೂ ತೆರೆದ ಸ್ಥಿತಿಯಲ್ಲಿಯೇ ಇದೆ.

ಇದರಿಂದ ಸಾರ್ವಜನಿಕರು ತೊಂದರೆ ಅನುಭವಿಸುತ್ತಲೇ ಇದ್ದಾರೆ. ಈ ಬಗ್ಗೆ ಕಟ್ಟಡ ಮಾಲಿಕರಾಗಲೀ, ಪಟ್ಟಣ ಪಂಚಾಯತ್‌ನವರಾಗಲೀ ತಲೆಕೆಡಿಸಿಕೊಂಡಿಲ್ಲ ಎಂದು ಆರೋಪ ಕೇಳಿ ಬಂದಿದೆ. ಈ ಚರಂಡಿಯನ್ನು ಮುಚ್ಚುವವರು ಯಾರು ಎನ್ನುವುದು ಸಾರ್ವಜನಿಕರ ಪ್ರಶ್ನೆಯಾಗಿದೆ. ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಲೇ ಇದ್ದರೂ ಯಾವುದೇ ಪ್ರಯೋಜನವಾಗುತ್ತಿಲ್ಲ.

Exit mobile version