Site icon Suddi Belthangady

ಕದ್ರಿ ಮಂಜುನಾಥ ಸ್ವಾಮಿ ದೇವಸ್ಥಾನದಲ್ಲಿ ಬಂದು ಹೇಳಲಿ – ತಾಕತ್ತಿದ್ದರೆ ಮೀಟಿಂಗ್‌ಗೆ ಬಂದು ಮಾತನಾಡಲಿ

ಬೆಳ್ತಂಗಡಿ: ಕಬಡ್ಡಿ ಅಸೋಸಿಯೇಶನ್‌ನಲ್ಲಿ ಅವ್ಯವಹಾರ ಆಗಿದೆ ಎಂದು ಹೇಳಿಕೆ ನೀಡಿರುವ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಅವರು ಕದ್ರಿ ಮಂಜುನಾಥ ಸ್ವಾಮಿ ದೇವಸ್ಥಾನಕ್ಕೆ ಬಂದು ಹೇಳಲಿ ಎಂದು ದ.ಕ. ಜಿಲ್ಲಾ ಕಬಡ್ಡಿ ಅಮೆಚೂರು ಅಸೋಸಿಯೇಶನ್ ಅಧ್ಯಕ್ಷ ರಾಕೇಶ್ ಮಲ್ಲಿ ಸವಾಲು ಹಾಕಿದ್ದಾರೆ. ಕಬಡ್ಡಿ ಅಸೋಸಿಯೇಶನ್ ಸದಸ್ಯರೂ ಆಗಿರುವ ಬೆಳ್ತಂಗಡಿ ತಾಲೂಕು ಕಬಡ್ಡಿ ಅಸೋಸಿಯೇಶನ್ ಗೌರವಾಧ್ಯಕ್ಷರೂ ಆಗಿರುವ ಶಾಸಕ ಹರೀಶ್ ಪೂಂಜ ಅವರು ಇಲ್ಲಿಯವರೆಗೆ ಒಂದೇ ಒಂದು ಮೀಟಿಂಗ್‌ಗೆ ಬಂದಿಲ್ಲ. ತಾಕತ್ ಇದ್ದರೆ ಅವರು ಮೀಟಿಂಗ್‌ಗೆ ಬಂದು ಮಾತನಾಡಲಿ ಎಂದು ಇಂಟಕ್ ರಾಷ್ಟ್ರೀಯ ಮುಖಂಡರೂ ಆಗಿರುವ ರಾಕೇಶ್ ಮಲ್ಲಿ ಚಾಲೆಂಜ್ ಹಾಕಿದ್ದಾರೆ. ನಾನು ಅದು ಮಾಡಬಹುದು, ಇದು ಮಾಡಬಹುದು ಎಂದು ಪಟಾಕಿ ಬಿಡುವುದಲ್ಲ. ನಿಮ್ಮ ಊರಿಗೆ ಹೋಗುವ ರೋಡನ್ನು ಒಮ್ಮೆ ನೋಡಿ. ಆ ರೋಡಲ್ಲಿ ಯಾರಾದ್ರು ಹೋಗ್ತಾರ. ಹೋಗುವ ಊರಿನ ರಸ್ತೆಯನ್ನು ಮೊದಲು ಸರಿಪಡಿಸಿ ಎಂದೂ ಮಲ್ಲಿ ಅವರು ಪೂಂಜರಿಗೆ ಟಾಂಗ್ ನೀಡಿದ್ದಾರೆ.

ನಾವು ಯಾವತ್ತೂ ರೆಡಿ ಇದ್ದೇವೆ: ಅಮೆಚೂರು ಕಬಡ್ಡಿ ಅಸೋಸಿಯೇಶನ್ ಮಂಗಳೂರು ತಾಲೂಕು ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿರುವ ದ.ಕ. ಜಿಲ್ಲಾ ಕಬಡ್ಡಿ ಅಸೋಸಿಯೇಶನ್ ಅಧ್ಯಕ್ಷರೂ ಇಂಟಕ್ ರಾಷ್ಟ್ರೀಯ ಕಾರ್ಯದರ್ಶಿಯೂ ಆಗಿರುವ ರಾಕೇಶ್ ಮಲ್ಲಿ ಅವರು ಕಬ್ಬಡಿ ಅಸೋಸಿಯೇಷನ್ ಇವತ್ತು ದುಡ್ಡು ಮಾಡಿದೆ, ಅಸೋಸಿಯೇಷನ್ ದುಡ್ಡು ತಿಂದು ಹಾಕಿದ್ದಾರೆ, ಇದಕ್ಕೆ ಸರಿಯಾದ ಲೆಕ್ಕ ಇಲ್ಲ ಎಂದು ಬೆಳ್ತಂಗಡಿಯ ಶಾಸಕರಾದ ಹರೀಶ್ ಪೂಂಜರವರು ಆರೋಪ ಮಾಡಿದ್ದಾರೆ. ನಾವು ಕಬಡ್ಡಿ ಅಸೋಸಿಯೇಷನ್‌ನಿಂದ ದುಡ್ಡು ತಿಂದಿದ್ದರೆ ಅವರು ನಮ್ಮ ಕದ್ರಿ ಮಂಜುನಾಥ ಸ್ವಾಮಿಯ ದೇವಸ್ಥಾನಕ್ಕೆ ಬಂದು ಹೇಳಲಿ. ಅವರಿಗೆ ಹೇಳಿದವರು ಮತ್ತು ಅವರು ಯಾರಾದರೂ ಬಂದು ನಾವು ಒಂದು ರೂಪಾಯಿಯಾದರೂ ದುಡ್ಡು ತಿಂದಿದ್ದಾರೆ ಎಂದು ಹೇಳಿದರೆ ನಾವು ಕೂಡ ಬಂದು ಹೇಳುತ್ತೇವೆ. ನಾವು ಯಾವಾಗ ಬರುತ್ತೇವೆ ಅಥವಾ ಅವರು ಯಾವಾಗ ಬರುತ್ತಾರೆ ಎಂದು ಹೇಳಲಿ ನಾವು ಯಾವತ್ತೂ ರೆಡಿ ಇದ್ದೇವೆ ಎಂದು ಹೇಳಿದ್ದಾರೆ.

ನಮ್ಮ ಯೋಗ್ಯತೆ ಅಳೆಯುವ ಅಗತ್ಯ ಇಲ್ಲ: ಶಾಸಕರು ಹೇಳುತ್ತಾರೆ ಯಾರ್‍ಯಾರೆಲ್ಲಾ ಯೋಗ್ಯತೆ ಇಲ್ಲದವರು ಕಬಡ್ಡಿ ಅಸೋಸಿಯೇಷನ್ ಅಧ್ಯಕ್ಷರಾಗಿದ್ದಾರೆ ಎಂದು ಹೇಳುತ್ತಾರೆ. ಸ್ವಾಮಿ ನಿಮಗೆ ಅವಕಾಶ ಸಿಕ್ಕಿದೆ. ನಾವು ಕೂಡ ಇಲ್ಲಿಗೆ ಯೋಗ್ಯತೆ ಇದ್ದೇ ಇಲ್ಲಿಗೆ ಬಂದವರು. ಅವರು ಯಾವತ್ತು ಎಂಎಲ್‌ಎ ಆದ್ರ ಆಗ ನನಗೆ ಕೂಡ ಯೋಗ್ಯತೆಯಿಂದ ಪಕ್ಷ ಟಿಕೆಟ್ ಕೊಟ್ಟಿದೆ. ನನ್ನ ನಸೀಬು ಸರಿಯಿರ್ಲಿಲ್ಲ. ನಾನು ಸೋತು ಹೋದೆ. ಅವ್ರು ವಿನ್ ಆದ್ರು. ಡಿಫರೆನ್ಸ್ ಆದದ್ದು ಅಷ್ಟು ಮಾತ್ರ ಹೊರತು ನಮ್ಮ ಯೋಗ್ಯತೆಯನ್ನು ಅಳೆಯಲು ಹರೀಶ್ ಪೂಂಜ ಅಗತ್ಯ ಇಲ್ಲ. ಅವರು ಎಷ್ಟು ದೊಡ್ಡ ಜನ ಅದರೂ ತೊಂದರೆ ಇಲ್ಲ. ನಮ್ಮ ಯೋಗ್ಯತೆ ನಮಗೆ ಗೊತ್ತಿದೆ. ನಮ್ಮ ಕಬಡ್ಡಿ ಅಸೋಸಿಯೇಷನ್‌ನಿಂದ ಸರಿಯಾದ ಯುವಕರನ್ನು ಅರಿಸಿಕೊಳ್ಳುತ್ತಿಲ್ಲ ಎಂದು ಆರೋಪ ಮಾಡುತ್ತಾರೆ. ನಾವು ಸರಿಯಾದ ಯುವಕರನ್ನು ಅರಿಸಿಕೊಳ್ಳದಿದ್ದರೆ ನಾವು ರಾಜ್ಯದಲ್ಲಿ ಪ್ರಥಮ, ಮಹಿಳಾ ವಿಭಾಗದಲ್ಲಿ ದ್ವಿತೀಯ ಸ್ಥಾನ ಪಡೆಯಲು ಹೇಗೆ ಸಾಧ್ಯ ಎಂದು ಪ್ರಶ್ನೆ ಮಾಡಿದ ರಾಕೇಶ್ ಮಲ್ಲಿ ಅವರು ಈ ಪೂಂಜರಿಗೆ ಕಬಡ್ಡಿ ಮೇಲೆ ಅಷ್ಟೊಂದು ಪ್ರೀತಿ ಇರುವಾಗ ಅವರು ಬೆಳ್ತಂಗಡಿಯಲ್ಲಿ ಕಬಡ್ಡಿ ಟೂರ್ನಮೆಂಟ್ ಮಾಡಬಹುದು. ಮೊನ್ನೆ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ರು. 9 ಕೋಟಿ ವೆಚ್ಚದಲ್ಲಿ ಸರಕಾರದಿಂದ ಸ್ಟೇಡಿಯಂ ಮಾಡಬೇಕು ಎಂದು ಇದ್ದೇನೆ ಎಂದು ಹೇಳಿದ್ರು. ನಮಗು ಮನಸ್ಸಿದೆ ಸ್ಟೇಡಿಯಂ ಮಾಡಬೇಕು ಅಂತ. ಸ್ಟೇಡಿಯಂ ಮಾಡಲಿ. ಮಾಡಿ ಆದ ಮೇಲೆ ಹೇಳಲಿ. ನಾನು ಸ್ಟೇಡಿಯಂ ಮಾಡಿದ್ದೇನೆ ಎಂದು ಹೇಳಲಿ ಎಂದು ಹೇಳಿದರು. ನಾನು ಅದು ಮಾಡಬಹುದು, ಇದು ಮಾಡಬಹುದು ಎಂದು ಪಟಾಕಿ ಬಿಡುವುದಲ್ಲ. ನಿಮ್ಮ ಊರಿಗೆ ಹೋಗುವ ರೋಡನ್ನು ಒಮ್ಮೆ ನೋಡಿ. ಆ ರೋಡಲ್ಲಿ ಯಾರಾದ್ರು ಹೋಗ್ತಾರ. ಹೋಗುವ ಊರಿನ ರಸ್ತೆಯನ್ನು ಮೊದಲು ಸರಿಪಡಿಸಿ. ಕಬಡ್ಡಿ ಅಸೋಸಿಯೇಷನ್ ಸದಸ್ಯರೂ ಆಗಿದ್ದಾರೆ ಮತ್ತು ಬೆಳ್ತಂಗಡಿ ಕಬಡ್ಡಿ ಅಸೋಸಿಯೇಷನ್ ಗೌರವಾಧ್ಯಕ್ಷರೂ ಆಗಿದ್ದಾರೆ. ಇಲ್ಲಿಯವರೆಗೆ ಒಂದೇ ಒಂದು ಮೀಟಿಂಗ್‌ಗೆ ಬರಲಿಲ್ಲ. ತಾಕತ್ತು ಇದ್ದಾರೆ ಮೀಟಿಂಗ್ ಬಂದು ಮಾತಾಡಲಿ. ಏನು ಸಮಸ್ಯೆಯಾಗಿದೆ ಎಂದು ಮೀಟಿಂಗ್ ಬಂದು ಮಾತನಾಡಲಿ ಎಂದು ಸವಾಲು ಹಾಕಿದ ರಾಕೇಶ್ ಮಲ್ಲಿ ಅವರು 31 ಜಿಲ್ಲೆಗಳಲ್ಲಿ ಕೂಡ ಕಬಡ್ಡಿ ಅಸೋಸಿಯೇಷನ್ ಇದೆ. ಎಲ್ಲರಿಗೂ ಕೂಡ ಅವಕಾಶ ಕೊಡಬೇಕಾಗುತ್ತದೆ. ನಮ್ಮ ಜಿಲ್ಲೆಯ ಕಬಡ್ಡಿ ಆಟಗಾರರು ಒಳ್ಳೆಯ ಸಾಧನೆಯನ್ನು ಮಾಡಿದ್ದಾರೆ. ಆದರೆ ರಾಜ್ಯದಲ್ಲಿ ಅವಕಾಶ ಸಿಗಲಿಲ್ಲ. ನಾವು ಲೆಕ್ಕ ಪತ್ರಗಳನ್ನು ಸರಿ ಮಾಡಿಲ್ಲ ಎಂದು ಆರೋಪ ಮಾಡುತ್ತಾರೆ. ಆದರೆ ನಾವು ಎಲ್ಲಾ ಲೆಕ್ಕ ಸರಿ ಇದೆ. ಬೇರೆ ಬೇರೆ ಸ್ಪೋರ್ಟ್ಸ್‌ನಲ್ಲಿ ಎಷ್ಟೋ ಅಸೋಸಿಯೇಷನ್ ಇದೆ. ಇವರಿಗೆ ಬೇರೆ ಸ್ಪೋರ್ಟ್ಸ್‌ನಲ್ಲಿ ಅಸೋಸಿಯೇಷನ್ ಬಗ್ಗೆ ಯಾಕೆ ನೆನಪು ಆಗಲ್ಲ. ಕಾನೂನು ಎಲ್ಲರಿಗೂ ಕೂಡ ಒಂದೇ. ಬೇರೆ ಅಸೋಸಿಯೇಷನ್ ಬಗ್ಗೆ ಮಾತನಾಡುವುದಿಲ್ಲ ಹರೀಶ್ ಪೂಂಜರಿಗೆ ಕಬಡ್ಡಿ ಅಸೋಸಿಯೇಷನ್ ಮಾತ್ರ ಸರಿ ಇಲ್ಲ. ಬೆಳ್ತಂಗಡಿಯಲ್ಲಿ ಕೂಡ ರಾಷ್ಟ್ರೀಯ ಟೂರ್ನಮೆಂಟ್ ಮಾಡಲಿ ಎಂದು ಹೇಳಿದರು.

ಪಟಾಕಿ ಬಿಟ್ಟರೆ ನಡೆಯುವುದಿಲ್ಲ: ಪುರುಷೋತ್ತಮ ಪೂಜಾರಿಯ ಮನೆ ವಿಳಾಸವನ್ನು ನಮ್ಮ ಅಸೋಸಿಯೇಷನ್‌ಗೆ ಕೊಟ್ಟಿದ್ದೇವೆ. ಇವರಿಗೆ ಆಫೀಸ್ ಮಾಡುವಂತಹ ಯೋಗ್ಯತೆ ಇಲ್ಲ ಎಂದು ಹೇಳುತ್ತಾರೆ. ಅವರ ಮನೆಯ ವಿಳಾಸ ಕೊಟ್ಟರೆ ಏನು ಸಮಸ್ಯೆ ಈಗ. ನಮಗೆ ಅಲೋಶಿಯಸ್ ಕಾಲೇಜು ಎದುರುಗಡೆ ಜಿಲ್ಲಾ ಇಂಟಕ್ ಆಫೀಸ್ ಇದೆ. ನಾವು ಯಾವುದೇ ಅಸೋಸಿಯೇಷನ್ ಮೀಟಿಂಗ್ ಇದ್ದರೆ ಅಲ್ಲಿ ನಡೆಸಲು ಅನುಮತಿ ಕೊಟ್ಟಿದ್ದೇವೆ. ನಾವು ಯಾವುದೇ ಒಂದು ನೋಂದಣಿ ಮಾಡಬೇಕಾದರೆ ವಿಳಾಸ ಬೇಕು. ಅದಕ್ಕೆ ನಾವು ಪುರುಷೋತ್ತಮ ಪೂಜಾರಿಯವರ ಮನೆಯ ವಿಳಾಸವನ್ನು ಕೊಟ್ಟಿದ್ದೇವೆ. ಮೊದಲು ಅವರು ಬಾಡಿಗೆಯಲ್ಲಿ ಇದ್ದರು. ಆ ಮೇಲೆ ಅವರು ಸ್ವಂತ ಮನೆಗೆ ಹೋದರು. ನಮ್ಮ ಸಣ್ಣ ತಪ್ಪು ಅಂದರೆ ಅವರು ಬಾಡಿಗೆ ಮನೆಯಿಂದ ಸ್ವಂತ ಮನೆಗೆ ಹೋಗುವಾಗ ವಿಳಾಸವನ್ನು ಬದಲಾವಣೆ ಮಾಡಲು ಮರೆತು ಹೋಯಿತು. ಪ್ರೊ. ಕಬ್ಬಡಿಗೆ ಮತ್ತು ಅಸೋಸಿಯೇಷನ್‌ಗೆ ಸಂಬಂಧ ಇಲ್ಲ. ನಾನು ರಾಜ್ಯದ ಅಧ್ಯಕ್ಷ ಆದ ಮೇಲೆ ಎಷ್ಟು ಮಕ್ಕಳಿಗೆ, ಯುವಕ, ಯುವತಿಯರಿಗೆ ಅವಕಾಶ ಸಿಕ್ಕಿದೆ ಎಂದು ಪಟ್ಟಿ ಮಾಡಲಿ. ನಾವು ಎದುರು ಎದುರು ಕೂತು ಮಾತನಾಡುವ ಯಾರೋ ಹೇಳಿ ಕೊಡುತ್ತಾರೆ ಎಂದು ಪಟಾಕಿ ಬಿಟ್ಟರೆ ನಡೆಯುವುದಿಲ್ಲ ಎಂದು ರಾಕೇಶ್ ಮಲ್ಲಿ ಹೇಳಿದರು.

Exit mobile version