Site icon Suddi Belthangady

ವಸಂತ ಬಂಗೇರರ ಹುಟ್ಟುಹಬ್ಬ ಪ್ರಯುಕ್ತ ನಡೆಯುವ ರಕ್ತದಾನ ಮತ್ತು ಕಬಡ್ಡಿ ಪಂದ್ಯಾಟಗಳಲ್ಲಿ ಭಾಗವಹಿಸುವಂತೆ ಪ್ರೀತಿತಾ ಬಂಗೇರ ಮನವಿ

ಬೆಳ್ತಂಗಡಿ: ಕೀರ್ತಿಶೇಷ ಮಾಜಿ ಶಾಸಕ ವಸಂತ ಬಂಗೇರರ 79 ನೇ ಹುಟ್ಟುಹಬ್ಬದ ಪ್ರಯುಕ್ತ ಅಭಿಮಾನಿ ಸಮಿತಿ ವತಿಯಿಂದ ಬೆಳ್ತಂಗಡಿಯ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಸಭಾ ಭವನದಲ್ಲಿ ನಡೆಯುವ ಬೃಹತ್ ರಕ್ತದಾನ ಶಿಬಿರ ಮತ್ತು ಬಂಗೇರ ಬ್ರಿಗೇಡ್ ವತಿಯಿಂದ ಮದ್ದಡ್ಕದ ಬಂಡಿಮಠ ಮೈದಾನದಲ್ಲಿ ನಡೆಯಲಿರುವ ಕಬಡ್ಡಿ ಪಂದ್ಯಾಟಗಳಲ್ಲಿ ಬಂಗೇರರ ಅಭಿಮಾನಿಗಳು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸುವಂತೆ ವಸಂತ ಬಂಗೇರರ ಹಿರಿಯ ಪುತ್ರಿ ಪ್ರೀತಿತಾ ಬಂಗೇರ ಮನವಿ ಮಾಡಿದ್ದಾರೆ.

ಅವರು ಅಭಿಮಾನಿ ಸಮಿತಿಯ ವತಿಯಿಂದ ನಡೆದ ಸಿದ್ಧತಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ಸಭೆಯಲ್ಲಿ ಸಮಿತಿ ಅಧ್ಯಕ್ಷ ಈಶ್ವರ ಭಟ್, ಕಾರ್ಯದರ್ಶಿ ಮನೋಹರ ಕುಮಾರ್, ಗುರು ನಾರಾಯಣ ಸ್ವಾಮಿ ಸೇವಾ ಸಂಘದ ಅಧ್ಯಕ್ಷ ಜಯವಿಕ್ರಮ್, ಕಲ್ಲಾಪು, ಸುಮತಿ ಪ್ರಮೋದ್, ಎಂ. ಕೆ. ಪ್ರಸಾದ್, ಜಿಲ್ಲಾ ಕೆ. ಡಿ. ಪಿ ಸದಸ್ಯ ಸಂತೋಷ್ ಕುಮಾರ್, ಲಕ್ಷ್ಮಣ ಗೌಡ, ಮ್ಯಾಕ್ಸಿಮ್ ಸಿಕ್ವೇರಾ, ರಾಜೀವ ಸಾಲಿಯಾನ್, ಮೆಲ್ವಿನ್ ಪಿಂಟೋ, ಹರಿದಾಸ ಕೇದೆ, ಲೋಕೇಶ್ ಗೌಡ, ಸೌಮ್ಯ ಲಾಯಿಲ, ಉಷಾ ಶರತ್ ಮುಂತಾದವರು ಉಪಸ್ಥಿತರಿದ್ದರು.

Exit mobile version