Site icon Suddi Belthangady

ಶ್ರೀ ಉಮಾಪಂಚಲಿಂಗೇಶ್ವರ ಭಜನಾ ಮಂಡಳಿ – 35ನೇ ಸಾರ್ವಜನಿಕ ಶ್ರೀ ಅಯ್ಯಪ್ಪ ಸ್ವಾಮಿ ಪೂಜೆ- 43ನೇ ಭಜನಾ ವಾರ್ಷಿಕೋತ್ಸವ

ಗಂಡಿಬಾಗಿಲು: ಶ್ರೀ ಉಮಾಪಂಚಲಿಂಗೇಶ್ವರ ಭಜನಾ ಮಂಡಳಿ – 35ನೇ ಸಾರ್ವಜನಿಕ ಶ್ರೀ ಅಯ್ಯಪ್ಪ ಸ್ವಾಮಿ ಪೂಜೆ- 43ನೇ ಭಜನಾ ವಾರ್ಷಿಕೋತ್ಸವವು ತಿಮ್ಮಯ್ಯ ಗುರುಸ್ವಾಮಿ ನೇತೃತ್ವದಲ್ಲಿ ಜ. 9 ರಿಂದ 11 ರವರೆಗೆ ಭಜನಾ ಮಂಡಳಿ ವಠಾರದಲ್ಲಿ ನಡೆಯಲಿದೆ.

ಜ. 9 ರಂದು ಬ್ರಹ್ಮಶ್ರೀ ಗೋಪಾಲಕೃಷ್ಣ ಇರ್ವತ್ರಾಯರ ನೇತೃತ್ವದಲ್ಲಿ ಬೆಳಿಗ್ಗೆ ಗಂಟೆ 10:00 ರಿಂದ ಗಣಹೋಮ ಹಾಗೂ ಸಂಜೆ ಗಂಟೆ 5:00ರಿಂದ 20ನೇ ವರ್ಷದ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ ನಡೆಯಲಿದೆ.

ಜ. 11 ರಂದು ಸಂಜೆ ಗಂಟೆ 6:30 ರಿಂದ 7:30 ರವರೆಗೆ ದೀಪರಾಧನೆ, ಗಣಪತಿ ಪೂಜೆ, ಪಾಲುಕೊಂಬು ಉತ್ಸವ (ವನದುರ್ಗಾ ಭಜನಾ ಮಂಡಳಿ, ಆಲಂಗಾಯಿ ವಠಾರದಿಂದ), ರಾತ್ರಿ ಗಂಟೆ 9:00 ರಿಂದ 10:30 ರವರೆಗೆ: ಎಲ್ಲಾ ಭಕ್ತಾಧಿಗಳಿಗೆ ಅನ್ನಸಂತರ್ಪಣೆ. ರಾತ್ರಿ ಗಂಟೆ 10:30 ರಿಂದ ಭಜನಾ ಕಮ್ಮಟ, ಸುಬ್ರಹ್ಮಣ್ಯ ಸ್ವಾಮಿ ಪೂಜೆ, ದೇವಿ ಪೂಜೆ, ವಾವರ ಸ್ವಾಮಿ ಪೂಜೆ ಶಾಸ್ತಾವ್ ಪೂಜೆ, ಮಹಾಪೂಜೆ, ಹಾಗೂ ಎದಿರೇಲ್ಲು ಸಮಪಾರಾಯಣ, ಬೆಳಿಗ್ಗೆ 6:00ಕ್ಕೆ ಮಹಾ ಮಂಗಳಾರತಿ ಮತ್ತು ತೀರ್ಥ ಪ್ರಸಾದ ವಿತರಣೆ, ವಿಶೇಷ ಆಕರ್ಷಣೆ ಚೆಂಡೆಮೇಳ, ಶ್ರೀ ಕಪಿಲೇಶ್ವರ ಕಲಾ ಸಮಿತಿ ಚರ್ವಕ, ಕಡಬ ಕುಣಿತ ಭಜನಾ ಮೆರವಣಿಗೆ ನಾಗೇಶ್ ಬಿ. ನೆರಿಯ ನೇತೃತ್ವದಲ್ಲಿ ಬೆಳ್ತಂಗಡಿ ತಾಲೂಕಿನ ಭಜನಾ ಮಂಡಳಿಗಳಿಂದ ನೆರವೇರಲಿದೆ.

Exit mobile version