Site icon Suddi Belthangady

ಶಿಬರಾಜೆ: ಅಂಗನವಾಡಿ ಕೇಂದ್ರದ ಆವರಣ ಗೋಡೆ ರಚನೆ – ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ರೂ. 30,000 ಅನುದಾನ

ಶಿಬರಾಜೆ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಅಧ್ಯಕ್ಷ ಡಿ. ವೀರೇಂದ್ರ ಹೆಗ್ಗಡೆ ಅಂಗನವಾಡಿ ಕೇಂದ್ರ ಶಿಬರಾಜೆಯ ಆವರಣ ಗೋಡೆ ರಚನೆಗೆ ಮಂಜೂರು ಮಾಡಿರುವ ರೂ. 30,000/- ಮೊತ್ತದ ಮಂಜೂರಾತಿ ಪತ್ರವನ್ನು ಬೆಳ್ತಂಗಡಿ ತಾಲೂಕಿನ ಯೋಜನಾಧಿಕಾರಿ ಸುರೇಂದ್ರ ಅಂಗನವಾಡಿ ಬಾಲವಿಕಾಸ ಸಮಿತಿಯ ಅಧ್ಯಕ್ಷ ಪ್ರತಿಮಾರವರಿಗೆ ಮಂಜೂರಾತಿ ಪತ್ರವನ್ನು ಸಮಿತಿಯ ಪ್ರಮುಖರು ಹಾಗೂ ಗಣ್ಯರು ಮತ್ತು ಒಕ್ಕೂಟದ ಪದಾಧಿಕಾರಿಗಳ ಸಮ್ಮುಖದಲ್ಲಿ ಹತ್ತಾಂತರಿಸಲಾಯಿತು.

ಈ ಸಂದರ್ಭ ಕಳೆಂಜ ಗ್ರಾಮ ಪಂಚಾಯಿತಿ ಸದಸ್ಯ ಟಿ. ಎಸ್. ನಿತ್ಯಾನಂದ ರೈ, ಗ್ರಾಮ ಪಂಚಾಯತಿ ಸದಸ್ಯ ಪ್ರೇಮ ಬಿ. ಎಸ್., ಸದಾಶಿವೇಶ್ವರ ದೇವಸ್ಥಾನದ ಆಡಳಿತ ಸಮಿತಿಯ ಅಧ್ಯಕ್ಷ ಶ್ರೀಧರ್ ರಾವ್, ಬಾಲವಿಕಾಸ ಸಮಿತಿಯ ಸದಸ್ಯ ಪಿ. ಟಿ. ಸಭಾಸ್ಟೀನ್, ಬಾಲ ವಿಕಾಸ ಸಮಿತಿಯ ಸದಸ್ಯ ಸೇವ್ರಿನ್, ಬಾಲವಿಕಾಸ ಸಮಿತಿಯ ಸದಸ್ಯ ವೇದಾವತಿ, ಕೊಕ್ಕಡ ಜೆ.ಸಿ.ಐ ನ ಅಧ್ಯಕ್ಷ ಸಂತೋಷ್ ಜೈನ್, ಬಾಲ ವಿಕಾಸ ಸಮಿತಿಯ ಸದಸ್ಯ ಜಯವರ್ಮ ಜೈನ್, ಪ್ರಗತಿ ಬಂದು ಸ್ವ-ಸಹಾಯಸಂಘಗಳ ಒಕ್ಕೂಟದ ಮಾಜಿ ಅಧ್ಯಕ್ಷ ಬಾಲಕೃಷ್ಣ ದೇವಾಡಿಗ, ಅಂಗನವಾಡಿ ಕಾರ್ಯಕರ್ತೆ ಪ್ರಿಯ, ಅಂಗನವಾಡಿ ಸಹಾಯಕಿ ಅನ್ಸಿಲ್ಲ, ಶಿಬರಾಜೆಯ ಆಶಾ ಕಾರ್ಯಕರ್ತೆ ಮೀನಾಕ್ಷಿ, ಮೇಲ್ವಿಚಾರಕ ರವೀಂದ್ರ, ತಾಲೂಕಿನ ಕೃಷಿ ಅಧಿಕಾರಿ ರಾಮ್ ಕುಮಾರ್ ಉಪಸ್ಥಿತರಿದ್ದರು.

Exit mobile version