Site icon Suddi Belthangady

ಸುಲ್ಕೇರಿಮೊಗ್ರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆ ಫಲಿತಾಂಶಕ್ಕೆ ಕೋರ್ಟ್ ತಡೆ – ಸಹಕಾರಿ ಭಾರತಿಗೆ – 9, ಕಾಂಗ್ರೆಸ್ – 3

ಶಿರ್ಲಾಲು: ಸುಲ್ಕೇರಿಮೊಗ್ರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆ ಜ. ೮ರಂದು ನಡೆದಿದ್ದು, ಸಹಕಾರಿ ಭಾರತಿಗೆ ೯, ಕಾಂಗ್ರೆಸ್ ಬೆಂಬಲಿತ ೩ಸ್ಥಾನಗಳಿಸಿದೆ.
ಚುನಾವಣಾ ಕಣದಲ್ಲಿ ಸಾಮಾನ್ಯ ಕ್ಷೇತ್ರದಿಂದ ಬಿಜೆಪಿ ಬೆಂಬಲಿತ ಅಶೋಧರ ಎನ್, ತಾರನಾಥ ಕೆ., ನಾರಾಯಣ ರಾವ್ ಕೆ., ಹಿಂದುಳಿದ ವರ್ಗ ಎ ಸ್ಥಾನ ದಿಂದ ಆನಂದ ಸಾಲಿಯನ್, ಮಹಿಳಾ ಮೀಸಲು ಸ್ಥಾನದಿಂದ ಶಶಿಕಲಾ, ಶೀಲಾ, ಪರಿಶಿಷ್ಟ ಜಾತಿ ಮೀಸಲು ಸ್ಥಾನದಿಂದ ರಾಮ್ ಕುಮಾರ್, ಪರಿಶಿಷ್ಟ ಪಂಗಡ ಮೀಸಲು ಸ್ಥಾನದಿಂದ ಶೀನಪ್ಪ, ಸಾಲಗಾರರಲ್ಲದ ಕ್ಷೇತ್ರದಿಂದ ಸುಧೀರ್, ಕಾಂಗ್ರೆಸ್ ಬೆಂಬಲಿತ ಹಿಂದುಳಿದ ವರ್ಗ ಬಿ ಸ್ಥಾನದಿಂದ ಕುಶಾಲಪ್ಪ ಗೌಡ, ಸಾಮಾನ್ಯ ಸ್ಥಾನದಿಂದ ಅಶೋಕ ಸುವರ್ಣ, ಚಿದಾನಂದ ಸಾಲಿಯಾನ್ ಜಯಗಳಿಸಿದ್ದಾರೆ.

24 ಅಭ್ಯರ್ಥಿಗಳು ಚುನಾವಣೆಯಲ್ಲಿ ಸ್ಪರ್ದಿಸಿ ಜಿದ್ದಾ ಜಿದ್ದಿನ ಹೋರಾಟ ನಡೆಸಿದ್ದರು. ಆದರೂ ಎರಡೂ ಪಕ್ಷದ ಬೆಂಬಲಿತ ಅಭ್ಯರ್ಥಿಗಳು ಕೋರ್ಟ್ ಮೆಟ್ಟಲು ಏರಿದ್ದರಿಂದ ಫಲಿತಾಂಶಕ್ಕೆ ಕೋರ್ಟ್ ತಡೆ ನೀಡಿದೆ.

Exit mobile version