ನಡ: ಕಿರಿಯ ಪ್ರಾಥಮಿಕ ಶಾಲೆಯ ಬಳಿ 1 ತಿಂಗಳ ಹಿಂದೆ ಪಂಚಾಯತ್ ವತಿಯಿಂದ ಕೊಳವೆ ಬಾವಿಯನ್ನು ತೆರೆದು ನೀರು ಸಿಗದೆ ಇದ್ದ ಕಾರಣ ಅದರ ಕೇಸಿಂಗ್ ಪೈಪ್ ಹೊರತೆಗೆದು ಗುಂಡಿಯನ್ನು ಮುಚ್ಚದೆ ಅದರ ಮೇಲೆ ಗೋಣಿಯನ್ನು ಹಾಕಿ ಹೋಗಿರುವ ಘಟನೆ ನಡ ಶಾಲೆಯ ಸಮೀಪ ನಡೆದಿದೆ.
ಈ ಒಂದು ಘಟನೆಯ ಬಗ್ಗೆ ಶಾಲೆಯ ಆಡಳಿತ ಮಂಡಳಿ ಹಾಗೂ ಪೋಷಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಕ್ಷಣ ಸಂಬಂಧಪಟ್ಟ ಅಧಿಕಾರಿಗಳು ಕೊಳವೆ ಬಾವಿಯ ಗುಂಡಿಯನ್ನು ಮುಚ್ಚಿಕೊಡಬೇಕೆಂದು ಒತ್ತಾಯಿಸಿದ್ದಾರೆ.