Site icon Suddi Belthangady

ಹತ್ಯಡ್ಕ ಪ್ರಾಥಮಿಕ ಸಂಘದ ಚುನಾವಣೆ: ಫಲಿತಾಂಶ ಘೋಷಣೆಗೆ ತಡೆ – ಸಹಕಾರ ಭಾರತಿಯ11 ಸೌಹಾರ್ದ ಸಹಕಾರಿ ಒಕ್ಕೂಟದ ಓರ್ವ ಅಭ್ಯರ್ಥಿ ಮುನ್ನಡೆ

ಅರಸಿನಮಕ್ಕಿ: ಹತ್ಯಡ್ಕ ಪ್ರಾಥಮಿಕ ಸಂಘದ ಚುನಾವಣೆ ಜ. 8 ರಂದು ನಡೆದಿದ್ದು ಮತ ಎಣಿಕೆ ಕಾರ್ಯ ಮುಗಿದಿದೆ. ನ್ಯಾಯಾಲಯದ ತೀರ್ಪು ಬಾರದ ಕಾರಣ ಫಲಿತಾಂಶ ಘೋಷಣೆ ತಡೆ ಹಿಡಿಯಲಾಗಿದೆ. ಮತ ಎಣಿಕೆಯಲ್ಲಿ ಸಹಕಾರ ಭಾರತಿ ಅಭ್ಯರ್ಥಿಗಳು 12 ರಲ್ಲಿ 11 ಸ್ಥಾನಗಳಲ್ಲಿ ಜಯ ಸಾಧಿಸಿದ್ದು,
ಸೌಹಾರ್ದ ಸಹಕಾರಿ ಒಕ್ಕೂಟದ ಓರ್ವ ಸಾಮಾನ್ಯ ಕ್ಷೇತ್ರದಲ್ಲಿ ಗೆಲುವು ಪಡೆದಿದ್ದಾರೆ.

ಸಹಕಾರ ಭಾರತಿಯ ಅಭ್ಯರ್ಥಿಗಳಲ್ಲಿ ಸಾಮಾನ್ಯ ಕ್ಷೇತ್ರದಿಂದ ರಾಘವೇಂದ್ರ ನಾಯಕ್, ರಾಜು ಕೆ. ಸಾಲ್ಯಾನ್, ವರದಶಂಕರ್ ದಾಮ್ಲೆ, ರತೀಶ್ ಬಿ., ಕೊರಗಪ್ಪ ಗೌಡ ಮುನ್ನಡೆ ಸಾಧಿಸಿದ್ದು
ಸಾಮಾನ್ಯ ಮಹಿಳೆ ಕ್ಷೇತ್ರದಿಂದ ತಾರಾ ಚಿಪ್ಳುನ್ ಕರ್ ಗಂಗಾವತಿ ಮುನ್ನಡೆ ಗಳಿಸಿದ್ದಾರೆ.

ಪರಿಶಿಷ್ಟ ಜಾತಿಯಿಂದ ಬೇಬಿ ರಾಣ್ಯ, ಪರಿಶಿಷ್ಟ ಪಂಗಡದಿಂದ ನಾಗೇಶ್, ಹಿಂದುಳಿದ ವರ್ಗ ಬಿ ಯಿಂದ ಕೃಷ್ಣಪ್ಪ ಗೌಡ, ಹಿಂದುಳಿದ ವರ್ಗ ಎ ಯಿಂದ ಬೇಬಿ ಕಿರಣ್, ಸೌಹಾರ್ದ ಸಹಕಾರಿ ಒಕ್ಕೂಟದ ಸಾಮಾನ್ಯ ಕ್ಷೇತ್ರದಿಂದ ಧರ್ಮರಾಜ್ ಗೌಡ ಮುನ್ನಡೆಯಲ್ಲಿದ್ದಾರೆ.

Exit mobile version