Site icon Suddi Belthangady

ನಿಟ್ಟಡೆ: ಸಂಸ್ಥಾಪಕರ ದಿನಾಚರಣೆ

ವೇಣೂರು: ಕುಂಭಶ್ರೀ ಆಂಗ್ಲ ಮಾಧ್ಯಮ ಶಾಲಾ – ಕಾಲೇಜು ನಿಟ್ಟಡೆ. ಜ. 6 ರಂದು ಸಂಸ್ಥಾಪಕರ ದಿನಾಚರಣೆಯನ್ನು ಬಹಳ ವಿಜೃಂಭಣೆಯಿಂದ ಆಚರಿಸಲಾಯಿತು. ಈ ಕಾರ್ಯಕ್ರಮವನ್ನು ಶಾಲಾ ಸಂಸ್ಥಾಪಕ ಗಿರೀಶ್ ಕೆ. ಹೆಚ್. ಉದ್ಘಾಟಿಸಿ, ಈ ಸಂಸ್ಥೆಯು ಇಷ್ಟು ಉತ್ತಮ ಮಟ್ಟದಲ್ಲಿ ಬೆಳೆಯಲು ಶಿಕ್ಷಕರ ಪರಿಶ್ರಮ ಮತ್ತು ಹೆತ್ತವರ ಶ್ರಮವೇ ಕಾರಣ ಎಂದರು.

ಶಾಲಾ ಸಂಚಾಲಕ ಅಶ್ವಿತ್ ಕುಲಾಲ್ ಸಂಸ್ಕೃತಿ ಭರಿತವಾದ ಸಂಸ್ಥೆಯಲ್ಲಿ ಸರ್ ನ ಮಾರ್ಗದರ್ಶನವನ್ನು ಪಾಲಿಸಿದಲ್ಲಿ ನಾವು ಒಂದು ಒಳ್ಳೆಯ ಪಥದಲ್ಲಿ ಸಾಗಬಹುದು ಎಂದು ಕಿವಿಮಾತು ನೀಡಿದರು. ಅದೇ ರೀತಿ ಅತಿಥಿಯಾಗಿ ಹಳೆ ವಿದ್ಯಾರ್ಥಿ ಪೂಜಿತ್ ಕುಲಾಲ್ ಮತ್ತು ಕಾಲೇಜಿನ ಪ್ರಾಂಶುಪಾಲರು ಓಮನ ಶುಭ ಹಾರೈಸಿದರು.

ಹಾಗೆಯೇ ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ಸುಜಾತ, ಉಪಾಧ್ಯಕ್ಷ ವಸಂತ ಪಡೀಲ್, ಕುಂಭಶ್ರೀ ವೈಭವ ಸಮಿತಿಯ ಉಪಾಧ್ಯಕ್ಷ ಸೋಮನಾಥ ಕೆ. ವಿ., ಕುಂಭಶ್ರೀ ವೈಭವ ಸಮಿತಿಯ ಕಾರ್ಯದರ್ಶಿ ಗಣೇಶ್ ಕುಂದರ್ ಹಾಗೂ ಶೈಕ್ಷಣಿಕ ಶಿಕ್ಷಣ ಸಲಹೆಗಾರ ಉಷಾ ಜಿ., ದೀಕ್ಷ ಅಶ್ವಿತ್ ಕುಲಾಲ್, ಪೋಷಕರು ಹಾಗೂ ಎಲ್ಲಾ ಸಿಬ್ಬಂದಿ ವರ್ಗ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಸಿಹಿ ತಿಂಡಿಯನ್ನು ವಿತರಿಸಲಾಯಿತು. ಈ ಕಾರ್ಯಕ್ರಮವನ್ನು ಹಿರಿಯ ಪ್ರಾಥಮಿಕ ವಿಭಾಗದ ಮುಖ್ಯ ಶಿಕ್ಷಕಿ ಶುಭ ಮತ್ತು ಪೂರ್ವ ಪ್ರಾಥಮಿಕ ವಿಭಾಗದ ಉಪಮುಖ್ಯ ಶಿಕ್ಷಕಿ ಸೌಮ್ಯ ನಿರೂಪಿಸಿ, ಕಿರಿಯ ಪ್ರಾಥಮಿಕ ವಿಭಾಗದ ಮುಖ್ಯ ಶಿಕ್ಷಕಿ ಪವಿತ್ರ ಸ್ವಾಗತಿಸಿ, ಪ್ರೌಢಶಾಲಾ ವಿಭಾಗದ ಮುಖ್ಯ ಶಿಕ್ಷಕಿ ಶ್ವೇತಾ ವಂದಿಸಿದರು.

Exit mobile version