Site icon Suddi Belthangady

ಪದೋನ್ನತಿಗೊಂಡ ಕಳಿಯ ಬೇಬಿ ಗೌಡ ಪಿ. ಜೆ. ರವರಿಗೆ ಸನ್ಮಾನ

ಗೇರುಕಟ್ಟೆ: ಶ್ರೀ ದುರ್ಗಾ ಭಜನಾ ಮಂಡಳಿ ಹನುಮಾನ್ ನಗರ ಬೊಳ್ಳುಕಲ್ಲೂ ವತಿಯಿಂದ ಸೇನೆಯಲ್ಲಿ ಪದೋನ್ನತಿ ಹೊಂದಿದ ಕಳಿಯ ಗ್ರಾಮದ ಪೆರಾಜೆ ಮನೆತನದ ಬೇಬಿ ಗೌಡ ಪಿ. ಜೆ., ರವರನ್ನು ಜ. 7 ರಂದು ಭಜನಾ ಕಾರ್ಯಕ್ರಮದಲ್ಲಿ ಸನ್ಮಾನಿಸಾಯಿತು.

ಈ ಸಂದರ್ಭದಲ್ಲಿ ಭಜನಾ ಮಂಡಳಿಯ ಅಧ್ಯಕ್ಷ ದಿನೇಶ್ ಗೌಡ ಕಲ್ಕೂರ್ಣಿ, ಅರ್ಚಕ ಜಗದೀಶ್ ಹೀರ್ಯ, ಜತೆ ಅರ್ಚಕ ಸುಂದರ ಪೂಜಾರಿ ಪಾಳ್ಯ, ಜತೆ ಕಾರ್ಯದರ್ಶಿ ರಕ್ಷಿತ್ ಗೌಡ ಬಾಕಿಮರ್, ಗೌರವ ಸಲಹೆಗಾರ ಡಾಕಯ್ಯ ಗೌಡ ಹಿರ್ಯಾ, ಭಜನಾ ಮಂಡಳಿಯ ಪದಾಧಿಕಾರಿಗಳು, ಸನ್ಮಾನಿತರ ಪತ್ನಿ, ಮಕ್ಕಳು ಹಾಗೂ ಭಕ್ತರು ಉಪಸಿತ್ತರಿದ್ದರು.

Exit mobile version