Site icon Suddi Belthangady

ಧರ್ಮಸ್ಥಳ: ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆಗೆ ಯತ್ನ – ವಿಷಯ ತಿಳಿದು ಆತನನ್ನು ಕಾಪಾಡಿದ ಧನ್ವಿ ಆಂಬುಲೆನ್ಸ್ ಮಾಲಕ ಧನೇಶ್

ಧರ್ಮಸ್ಥಳ: ಜ. 6 ರಂದು ಬೆಂಗಳೂರು ಮೂಲದ ಜೆ. ಸಿ. ನಗರ ನಿವಾಸಿ ಮನೀಶ್(27) ಮಾನಸಿಕವಾಗಿ ಅಸ್ವಸ್ತಗೊಂಡು ಆತ್ಮಹತ್ಯೆ ಗೆಂದು ಧರ್ಮಸ್ಥಳ ಭಾಗಕ್ಕೆ ಬಂದಿದ್ದು ನೇತ್ರಾವತಿ ನದಿ ಆರಿಕೋಡಿ ಭಾಗಕ್ಕೆ ಅತ ತೆರಳಿ ಅಲ್ಲೆಲ್ಲೂ ಆತ್ಮಹತ್ಯೆಗೆ ಅವಕಾಶ ಸಿಗದೇ ಇದ್ದಾಗ ದೇವಸ್ಥಾನದ ಬಳಿ ಬಂದಿದ್ದ ಮನೀಶ್ ಎಂಬಾತ ಧರ್ಮಸ್ಥಳ ಕಡೆಗೆ ಬಂದಿರುವುದು ಆತನ ಅಪ್ಪ ಅಮ್ಮನಿಗೆ ಮೊದಲೇ ಗೊತ್ತಾಗಿದ್ದು, ಅವರು ಧನ್ವಿ ಆಂಬುಲೆನ್ಸ್ ಮಾಲಕ ಧನೇಶ್ ರ ಪರಿಚಯ ಇರುವ ಕಾರಣ ತಕ್ಷಣ ಅವರಿಗೆ ಕರೆ ಮಾಡಿ ವಿಷಯ ತಿಳಿಸಿದಾಗ ತಕ್ಷಣ ಕಾರ್ಯಪ್ರವೃತ್ತರಾಗಿ ಸಿ. ಸಿ. ಟಿ. ವಿ ಮೂಲಕ ಆತನನ್ನು ಪತ್ತೆ ಹಚ್ಚಿ ಹುಡುಕಾಡಿದಾಗ ದೇವಸ್ಥಾನದ ಬಳಿ ಇರುವುದನ್ನು ಕಂಡು ಆತನನ್ನು ಶಿಶಿಲ-ಅರಸಿನಮಕ್ಕಿ ಶೌರ್ಯ ವಿಪತ್ತು ತಂಡದ ಸದಸ್ಯರಾದ ಅವಿನಾಶ್ ಭಿಡೆ ಸಹಾಯ ಪಡೆದು ಧನೇಶ್ ಆಂಬುಲೆನ್ಸ್ ನಲ್ಲಿಯೇ ಬೆಂಗಳೂರಿನ ಸ್ಪಂದನ ಆಸ್ಪತ್ರೆಗೆ ಸೇರಿಸಿದ್ದು ಮನೆಯವರಿಗೆ ಒಪ್ಪಿಸಿದಂತಾಗಿದೆ.

Exit mobile version