Site icon Suddi Belthangady

ಶ್ರೀ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ಪುನರ್ ಪ್ರತಿಷ್ಠಾಷ್ಟಬಂಧ ಬ್ರಹ್ಮಕಲಶೋತ್ಸವ – ಹಸಿರುವಾಣಿ ಸಮರ್ಪಣೆ


ಬೈಪಾಡಿ: ಶ್ರೀ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ಪುನರ್ ಪ್ರತಿಷ್ಠಾಷ್ಟಬಂಧ ಬ್ರಹ್ಮಕಲಶೋತ್ಸವ, ಬ್ರಹ್ಮಶ್ರೀ ನೀಲೇಶ್ವರ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ಜ. 7 ರಿಂದ ಪ್ರಾರಂಭಗೊಂಡು 12 ರವರೆಗೆ ನಡೆಯಲಿದೆ.

ಜ. 5 ರಂದು ಬೆಳಿಗ್ಗೆ ಪ್ರಚಂಡಭಾನು ಭಟ್ ಪಾಂಬೇಲು ಉಗ್ರಾಣ ಮುಹೂರ್ತ ನೆರವೇರಿಸಿದರು. ನಂತರ ಸಂಜೆ ಪೆರ್ಲ-ಬೈಪಾಡಿ ದೇವಸ್ಥಾನದ ಪರಿಸರದವರಿಂದ ಹಸಿರುವಾಣಿ ಹೊರಕಾಣಿಕೆ ನಡೆಯಿತು.

ಹಸಿರುವಾಣಿ ಹೊರಕಾಣಿಕೆಯ ಮೆರವಣಿಗೆಯ ಉದ್ಘಾಟನೆಯನ್ನು ಬ್ರಹ್ಮಕಲಶೋತ್ಸವದ ಪ್ರಧಾನ ಕಾರ್ಯದರ್ಶಿ ಹರೀಶ್ ಗೌಡ ಪರಪ್ಪಾಜೆ ಉದ್ಘಾಟನೆಯನ್ನು ಮಾಡಿದರು.

ಈ ಸಂದರ್ಭದಲ್ಲಿ ಬ್ರಹ್ಮಕಲಶೋತ್ಸವ ಸಮಿತಿಯ ಪ್ರಧಾನ ಸಂಚಾಲಕ ಬಿ. ಬಾಲಕೃಷ್ಣ ಪೂಜಾರಿ, ಬಜೆಗುತ್ತು, ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಮಹಾಬಲ ಗೌಡ ನಾಗಂದೋಡಿ, ಕೋಶಾಧಿಕಾರಿ ಕೇಶವ ಗೌಡ ಕೋಂಗುಜೆ ಕೊಯ್ಯೂರು, ಅನುವಂಶಿಕ ಆಡಳಿತ ಮೊಕ್ತೇಸರಾದ ಕುಕ್ಕಪ್ಪ ಗೌಡ ಕೋಡಿಮಜಲು, ಆಡಳಿತ ಮಂಡಳಿಯ ಅಧ್ಯಕ್ಷ ರಮೇಶ್ ಗೌಡ ಅಡ್ಡಾರು, ಕಾರ್ಯದರ್ಶಿ ಉಮೇಶ್ ಗೌಡ ಅಂಗಡಿಮಜಲು, ಪ್ರಧಾನ ಅರ್ಚಕ ಅನಂತರಾಮ ಶಬರಾಯ, ಮಹಿಳಾ ಸಮಿತಿಯ ಅಧ್ಯಕ್ಷೆ ಶ್ವೇತಾ ಹಾರ್ತ್ಯಾರು, ಸಿದ್ಧಿವಿನಾಯಕ ಭಜನಾ ಮಂಡಳಿಯ ಅಧ್ಯಕ್ಷ ಲಕ್ಷ್ಮಣ ಗೌಡ ಫಲಸದಕೋಡಿ ಉಪಸ್ಥಿತರಿದ್ದರು.

Exit mobile version