Site icon Suddi Belthangady

ಎಸ್. ಎಸ್. ಎಫ್ ಮಹಾಸಭೆ – ನೂತನ ಪದಾಧಿಕಾರಿಗಳ ಆಯ್ಕೆ

ಇಳಂತಿಲ: ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ಸ್ ಫೆಡರೇಷನ್ (ರಿ.) ಎಸ್. ಎಸ್. ಎಫ್ ಇದರ ಉರುವಾಲು ಪದವು ಸೆಕ್ಟರ್ ವಾರ್ಷಿಕ ಮಹಾಸಭೆಯು ಜ. 5 ರಂದು ಮುರ ಮದರಸ ಹಾಲ್ ನಲ್ಲಿ ನಡೆಯಿತು. ಸೆಕ್ಟರ್ ಅಧ್ಯಕ್ಷ ಸಂಶುದ್ದೀನ್ ಹಿಮಮಿ ಸಭಾಧ್ಯಕ್ಷತೆಯಲ್ಲಿ ನಡೆದ ಸದ್ರಿ ಮಹಾಸಭೆಯನ್ನು ನೌಶಾದ್ ಸಖಾಫಿ ಉದ್ಘಾಟಿಸಿದರು. ಸೆಕ್ಟರ್ ಪ್ರ‌. ಕಾರ್ಯದರ್ಶಿ ನಿಝಾಂರವರು ಸ್ವಾಗತಿಸಿ ವರದಿ ಮಂಡನೆ ಮಾಡಿದರು. ಕೋಶಾಧಿಕಾರಿ ರಿಯಾಝ್ ಲೆಕ್ಕಪತ್ರ ವಾಚಿಸಿದರು.

ಎಸ್. ಎಸ್. ಎಫ್ ಉಪ್ಪಿನಂಗಡಿ ಡಿವಿಷನಿಂದ ವೀಕ್ಷಕರಾಗಿ ಆಗಮಿಸಿದ ಶರೀಫ್ ಸಖಾಫಿ ಉಜಿರೆಬೆಟ್ಟು ನೇತೃತ್ವದಲ್ಲಿ ಹೊಸ ಸಮಿತಿಯನ್ನು ಈ ಕೆಳಗಿನಂತೆ ಆಯ್ಕೆ ಮಾಡಲಾಯಿತು.

ಅಧ್ಯಕ್ಷರಾಗಿ ಸ್ವಾದಿಕ್ ಸಅದಿ ಕನ್ಯಾರಕೋಡಿ, ಉಪಾಧ್ಯಕ್ಷರಾಗಿ ಎ. ಡಿ. ವಿ. ಆಸ್ರಫ್ ಕನ್ಯಾರಕೋಡಿ, ಪ್ರಧಾನ ಕಾರ್ಯದರ್ಶಿಯಾಗಿ ಆಶಿಕ್ ಯು. ಕೆ ಉರುವಾಲು ಪದವು, ಕೋಶಾಧಿಕಾರಿಯಾಗಿ ಆಸಿಫ್ ಅಂಡೆಕೇರಿ, ಕ್ಯೂಡಿ ಕಾರ್ಯದರ್ಶಿಯಾಗಿ ಸಿರಾಜುದ್ದೀನ್ ಸಅದಿ ಪದ್ಮುಂಜ, ದ ಅವಾ ಕಾರ್ಯದರ್ಶಿಯಾಗಿ ಸೈಫುದ್ದೀನ್ ಹಾಶಿಮಿ ಪದ್ಮುಂಜ, ಕ್ಯಾಂಪಸ್ ಕಾರ್ಯದರ್ಶಿಯಾಗಿ ಸವಾದ್ ಬಟ್ಲಡ್ಕ, ಜಿ. ಡಿ. ಕಾರ್ಯದರ್ಶಿಯಾಗಿ ಫಾರೂಕ್ ಕನ್ಯಾರಕೋಡಿ, ರೈಂಬೋ ಕಾರ್ಯದರ್ಶಿಯಾಗಿ ಆರಿಸ್ ಮುರ, ಮೀಡಿಯಾ ಕಾರ್ಯದರ್ಶಿಯಾಗಿ ಸಹೀರ್ ಉರುವಾಲು ಪದವು ಆಯ್ಕೆಯಾದರು.

ಕಾರ್ಯಕ್ರಮದಲ್ಲಿ ಮುರ ಜಮಾಅತ್ ಅಧ್ಯಕ್ಷ ಇಸ್ಮಾಯಿಲ್, ಕೆ. ಸಿ. ಎಫ್. ನಾಯಕ ಇರ್ಫಾನ್ ಕನ್ಯಾರಕೋಡಿ, ಅಲ್ತಾಫ್ ಅಂಡೆಕೇರಿ ಉಪಸ್ಥಿತರಿದ್ದರು‌.

Exit mobile version