Site icon Suddi Belthangady

ಎಳನೀರು: ವಿದ್ಯುತ್ ಅವಘಡ – 30 ಲಕ್ಷ ರೂ. ನಷ್ಟ

ಬೆಳ್ತಂಗಡಿ: ಎಳನೀರು ಪ್ರಶಾಂತ್ ವೈ. ಆರ್ ರವರ ಮನೆಯು ಜ. 4 ರಂದು ಸಂಜೆ ಸುಮಾರು 7 ಗಂಟೆಗೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಮನೆ ಸಂಪೂರ್ಣ ನಾಶವಾಗಿದೆ.

ಬೆಂಕಿಯಲ್ಲಿ ಮನೆಯಲ್ಲಿದ್ದ ಸುಮಾರು 2 ಲಕ್ಷ ರೂ. ಮೊತ್ತದ ಅಡಿಕೆ, 1 ಲಕ್ಷ ರೂ. ಮೊತ್ತದ ಕಾಫಿ ಬೀಜ, 50 ಸಾವಿರ ಮೊತ್ತದ ಕಾಳುಮೆಣಸು, ಅಲ್ಲದೆ ಬಟ್ಟೆ ಬರೆ ಹಾಗೂ 2 ಲಕ್ಷ ರೂ. ಮೊತ್ತದ ನಗದು ಅಲ್ಲದೆ, ಪಾತ್ರೆ ಪರಿಕರಗಳು ನಾಶವಾಗಿರುತ್ತದೆ.

ಹಾಗೂ ಮನೆಯ ರೀಪು, ಪಕ್ಕಾಸು, ಹಂಚು ಇತ್ಯಾದಿ ಸಂಪೂರ್ಣ ನಾಶವಾಗಿದ್ದು, ನಷ್ಟದ ಮೊತ್ತ 30 ಲಕ್ಷಕ್ಕೂ ಹೆಚ್ಚಾಗಿದೆ.

ಪ್ರಸ್ತುತ ವಾಸಿಸಲು ಮನೆ ಇಲ್ಲ. ಅದರಿಂದ ಸೂಕ್ತ ತನಿಖೆ ನಡೆಸಿ ಸರಕಾರ ಯಾವುದಾದರೂ ಯೋಜನೆ ಅಡಿ ವಾಸ ಯೋಗ್ಯ ಮನೆ ನಿರ್ಮಿಸಿ ಜೀವನ ನಿರ್ವಹಣೆಗೆ ಸೂಕ್ತ ಪರಿಹಾರ ಒದಗಿಸಿ ಕೊಡಬೇಕಾಗಿ ಬೆಳ್ತಂಗಡಿ ತಾಲೂಕು ತಹಶೀಲ್ದಾರರಿಗೆ ಮನವಿ ಸಲ್ಲಿಸಿದ್ದಾರೆ.

Exit mobile version